Saturday, January 18, 2025
Homeಯಕ್ಷಗಾನಭೀಷ್ಮ ವಿಜಯ - ತಾಳಮದ್ದಳೆ

ಭೀಷ್ಮ ವಿಜಯ – ತಾಳಮದ್ದಳೆ

ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ ನಡೆಯಿತು. 

ಬನ್ನೂರು ರಾಜ್ ಗೋಪಾಲ್ ಭಟ್ ಇವರ ಪ್ರಾಯೋಜಿತ ” ಭೀಷ್ಮ ವಿಜಯ ” ಎಂಬ ಪ್ರಸಂಗದ ತಾಳಮದ್ದಳೆ ಆಯೋಜಿಸಲಾಗಿತ್ತು. 

ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್ ‌, ನಿತಿಶ್ ಕುಮಾರ್ ಮನೊಳಿತ್ತಾಯ ಎಂಕಣ್ಣಮೂಲೆ , ಪದ್ಯಾಣ ಶಂಕರನಾರಾಯಣ ಭಟ್ , ಮುರಳೀಧರ ಕಲ್ಲೂರಾಯ ಭಾಗವಹಿಸಿದ್ದರು.

ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಭೀಷ್ಮ ) ಕು೦ಬ್ಳೆ ಶ್ರೀಧರ್ ರಾವ್‌ ( ಅಂಬೆ ) ಡಾ.ವಿದ್ವಾನ್ ವಿನಾಯಕ ಭಟ್ ಗಾಳಿಮನೆ ( ಪರಶುರಾಮ ) ಭಾಸ್ಕರ್ ಬಾರ್ಯ ( ಸಾಲ್ವ ) ಪೇರೋಡಿ ಅಶೋಕ ಸುಬ್ರಹ್ಮಣ್ಯ ( ವೃದ್ಧವಿಪ್ರ ) ಅರ್ಥಧಾರಿಗಳಾಗಿ ಭಾಗವಹಿಸಿದರು. 

ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ. ಪ್ರಾಯೋಜಿತರನ್ನು ಶಾಲು ಹೋದಿಸಿ ಗೌರವಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ ಚಾರ ಪ್ರದೀಪ ಹೆಬ್ಬಾರ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments