Sunday, January 19, 2025
Homeಯಕ್ಷಗಾನಅಮೋಘ ಯಕ್ಷಗಾನ ಪ್ರದರ್ಶನ - ಸಾಯುಜ್ಯ ಸಂಗ್ರಾಮ, ಅಕ್ಷಯಾಂಬರ ವಿಲಾಸ

ಅಮೋಘ ಯಕ್ಷಗಾನ ಪ್ರದರ್ಶನ – ಸಾಯುಜ್ಯ ಸಂಗ್ರಾಮ, ಅಕ್ಷಯಾಂಬರ ವಿಲಾಸ

ಯಕ್ಷಗಾನ ಪ್ರಿಯರಿಗೆ ಈಗೀಗ ಮೇಳಗಳ ತಿರುಗಾಟದ ಸಮಯಕ್ಕೂ ಮಳೆಗಾಲಕ್ಕೂ ವ್ಯತ್ಯಾಸ ಗೊತ್ತಾಗದ ಪರಿಸ್ಥಿತಿ ಉಂಟಾಗಿದೆ. ಇದು ಆಶಾದಾಯಕ ಬೆಳವಣಿಗೆಯೂ ಹೌದು.

ಮೊದಲೆಲ್ಲಾ ಮಳೆಗಾಲ ಬಂತೆಂದರೆ ಕಲಾವಿದರು ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿಯೇ ವಿಭಿನ್ನ.

ಮೇಳಗಳ ತಿರುಗಾಟದ ಸಮಯಕ್ಕಿಂತಲೂ ಉತ್ತಮ ಪ್ರದರ್ಶನಗಳು ಮೆಳೆಗಾಲದಲ್ಲಿ ನೋಡಲು, ಆಸ್ವಾದಿಸಲು ಸಿಗುತ್ತವೆ ಎಂದು ಹಲವರ ಅಂಬೋಣ. ಯಾಕೆಂದರೆ ಈಗ ಎಲ್ಲಾ ಮೇಳಗಳ ಆಯ್ದ ಕಲಾವಿದರಿಂದ ಪ್ರದರ್ಶನಗಳು ನಡೆಯುತ್ತಿವೆ ಎಂಬ ಕಾರಣವಿರಬಹುದು. 

ಈ ಆದಿತ್ಯವಾರವೂ ಒಂದು ಯಕ್ಷಗಾನ ಪ್ರದರ್ಶನ ನಿಗದಿಯಾಗಿದೆ. ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಈ ಪ್ರದರ್ಶನ ನಡೆಯಲಿದೆ. ” ಸಾಯುಜ್ಯ ಸಂಗ್ರಾಮ, ಅಕ್ಷಯಾಂಬರ ವಿಲಾಸ” ಎಂಬ ಪ್ರಸಂಗವನ್ನು ನುರಿತ ಕಲಾವಿದರು ಆಡಿ ತೋರಿಸಲಿದ್ದಾರೆ.

ದಿನಾಂಕ 24.07.2022ರ ಆದಿತ್ಯವಾರ ಮಧ್ಯಾಹ್ನ ಘಂಟೆ 2ರಿಂದ ಯಕ್ಷಗಾನ ಪ್ರದರ್ಶನ ಆರಂಭವಾಗಲಿದೆ. ವಿವರಗಳಿಗೆ ಕರಪತ್ರದ ಚಿತ್ರ ನೋಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments