ರಾಜ್ಯಸಭೆಗೆ ನಾಮನಿರ್ದೇಶಿತರಾದ ಗೌರವಾನ್ವಿತ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಅಭಿನಂದನೆ ಸಲ್ಲಿಸಿದರು.
ಪ್ರತಿಷ್ಠಾನದ ಆತ್ಮೀಯರುಗಳು ಪೋಷಕರಾದ ಶ್ರೀ ಶ್ರೀಪತಿ ಭಟ್ ಮೂಡುಬಿದರೆ, ಶ್ರೀ ಭುವನಾಭಿರಾಮ ಉಡುಪ ಕಿನ್ನಿಗೊಳಿ, ಹಾಗು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರೋತ್ಸಾಹಕರಾದ ಶ್ರೀ ಜಯರಾಮ ರೈ ಸಿರಿಬಾಗಿಲು,ಶ್ರೀ ರವೀಂದ್ರ ರೈ ಸಿರಿಬಾಗಿಲು, ಶ್ರೀ ಹರೀಶ್ ಕೊಳ್ತಿಗೆ, ಶ್ರೀಮುಖ ಯಸ್.ಆರ್.ಮಯ್ಯ ಜತೆಗಿದ್ದರು.