ಪುತಿನ ಅವರ “ಹರಿಣಾಭಿಸರಣ”
ಬಹಳ ಸುಂದರ ಪದ್ಯಗಳಿರುವ ಈ ಗೀತನಾಟಕವನ್ನು ಯಕ್ಷಗಾನ ರೂಪಕವಾಗಿ ಪ್ರಸ್ತುತಪಡಿಸಲಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಈ ಗೀತನಾಟಕದ ಪದ್ಯಗಳು ನೇರವಾಗಿ ಯಕ್ಷಗಾನದ ಛಂದಸ್ಸಿನಲ್ಲಿಲ್ಲ.
ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು ಬಹಳ ಶ್ರಮ ಹಾಕಿ ಹರಿಣಾಭಿಸರಣ ವನ್ನು ಯಕ್ಷಗಾನಕ್ಕೆ ಅಳವಡಿಸಿ ಪ್ರಪ್ರಥಮ ಪ್ರಯೋಗವಾಗಿ ಪ್ರಸ್ತುತಪಡಿಸಲಿದ್ದಾರೆ.
ಸಾಹಿತ್ಯಪ್ರೇಮಿಗಳಿಗೂ, ಯಕ್ಷಪ್ರೇಮಿಗಳಿಗೂ ಇದೊಂದು ವಿನೂತನ ರಸಾನುಭವ.
ಇಂಥ ಅಪರೂಪದ ಕಾರ್ಯಕ್ರಮ ದಿನಾಂಕ 17-07-2022 ರವಿವಾರ ಸಂಜೆ 7:00 ಕ್ಕೆ ಪ್ರಸಾರವಾಗಲಿದೆ.
ಸಂಗೀತ ಸಂಯೋಜನೆ ಮತ್ತು ಭಾಗವತಿಕೆ: ಶ್ರೀ ಅನಂತ ಹೆಗಡೆ, ದಂತಳಿಗೆಮದ್ದಳೆ: ಶ್ರೀ ಅನಂತ ಪದ್ಮನಾಭ ಫಾಟಕ್ಚಂಡೆ: ಶ್ರೀ ಪ್ರಸನ್ನ ಹೆಗ್ಗಾರ
ಮುಮ್ಮೇಳ: ಶ್ರೀರಾಮ: ಶ್ರೀ ಸಂಜಯ ಬೆಳೆಯೂರು ಸೀತೆ: ಶ್ರೀ ಸದಾಶಿವ ಭಟ್, ಮಲವಳ್ಳಿ, ಲಕ್ಷ್ಮಣ: ಶ್ರೀ ನಾಗರಾಜ ಭಟ್, ಕುಂಕಿಪಾಲ್ ರಾವಣ: ಶ್ರೀ ಶಶಾಂಕ ಕಾಶಿ, ಹರಿಣ: ಕುಮಾರಿ ಅಭಿಜ್ಞಾ.
ಕಾರ್ಯಕ್ರಮ ನಿರ್ಮಾಣ ಮತ್ತು ನಿರೂಪಣೆ: ಶ್ರೀಮತಿ ಅಲಕಾ ಕಟ್ಟೇಮನೆ.
ಜೊತೆಗೂಡಿ ಕಾರ್ಯಕ್ರಮವನ್ನು ವೀಕ್ಷಿಸೋಣ. ಕಾರ್ಯಕ್ರಮ ವೀಕ್ಷಿಸಲು ಕೆಳಗಿನ link ಬಳಸಿ.