ಕಡಬ ತಾಲೂಕಿನ ಕೋಡಿಂಬಾಳದ ಸಮೀಪ ಖಾಸಗಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ಅಫಘಾತ ಸಂಭವಿಸಿದೆ.
ಕೋಡಿಮಾಳದ ಸಮೀಪ ರಸ್ತೆ ತಿರುವಿನಲ್ಲಿ ಬಸ್ ಮತ್ತು ಕಾರು ಢಿಕ್ಕಿಯಾಗಿ ಈ ಅಫಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಕಾರಿನಲ್ಲಿರುವ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೂಲಗಳ ಪ್ರಕಾರ ಇಂದು ಅಂದರೆ ಜುಲೈ 16ರ ಬೆಳಿಗ್ಗೆ ಅಫಘಾತ ಸಂಭವಿಸಿದೆ.
ಖಾಸಗಿ ಬಸ್ ಸುಗಮ ಟ್ರಾವೆಲ್ಸ್ ಬೆಂಗಳೂರಿನಿಂದ ಕಡಬ ಕಡೆಗೆ ಬರುತ್ತಿತ್ತು. ಇನ್ನೋವಾ ಕಾರು ಕಡಬದಿಂದ ಧರ್ಮಸ್ಥಳ ಕಡೆಗೆ ಸಂಚರಿಸುತ್ತಿತ್ತು.
ಶಿರಾಡಿ ಘಾಟ್ ನಲ್ಲಿ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಬಸ್ ಸುಬ್ರಹ್ಮಣ್ಯ ಮುಖಾಂತರ ಪಂಜ ದಾರಿಯಾಗಿ ಕಡಬದ ಕಡೆಗೆ ಬರುತ್ತಿತ್ತು ಎನ್ನಲಾಗಿದೆ.
ಈ ರಸ್ತೆಯಲ್ಲಿ ಅಲ್ಲಲ್ಲಿ ಹಲವಾರು ದೀರ್ಘ ತಿರುವುಗಳಿರುವುದರಿಂದ ಅತಿ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅಗತ್ಯವಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರನ್ನು ಸಣ್ಣಪುಟ್ಟ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್ ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.