ಹಿಂದೂ ವಿದ್ಯಾರ್ಥಿನಿಗೆ ಚಾಕಲೇಟ್ ಕೊಟ್ಟು ಆ ದೃಶ್ಯವನ್ನು ಸೆಲ್ಫೀ ತೆಗೆಯಲು ಯತ್ನಿಸಿದ ಘಟನೆ ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಆ ಬಗ್ಗೆ ಪ್ರಶ್ನಿಸಿದ ಹಿಂದೂ ವಿದ್ಯಾರ್ಥಿಗಳಿಗೆ ಅನ್ಯ ಕೋಮಿನ ತಂಡವೊಂದು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
ಹಲ್ಲೆ ನಡೆದ ಬಗ್ಗೆ ಹಲ್ಲೆಗೊಳಗಾದವರು ದೂರು ನೀಡಿದ್ದಾರೆ. ಪುತ್ತೂರಿನ ಸರಕಾರೀ ಕಾಲೇಜಿನಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ಅನ್ಯ ಕೋಮಿನ ವಿದ್ಯಾರ್ಥಿ ಚಾಕಲೇಟು ನೀಡಿದ್ದನಂತೆ.
ಆದರೆ ಅದು ಅಷ್ಟಕ್ಕೇ ನಿಂತಿದ್ದರೆ ಪ್ರಕರಣ ಬೆಳೆಯುತ್ತಿರಲಿಲ್ಲ. ಚಾಕಲೇಟ್ ಕೊಡುವುದರ ಜೊತೆಗೆ ಆತನಿಗೊಂದು ಸೆಲ್ಫೀ ತೆಗೆಯುವ ಬಯಕೆಯಾಗಿತ್ತು. ಸೆಲ್ಫೀ ಫೋಟೋ ತೆಗೆಯುದಕ್ಕೆ ಆತ ಯತ್ನಿಸಿದ್ದಾನೆ ಎಂಬ ಮಾಹಿತಿ ತಿಳಿದ ಹಿಂದೂ ವಿದ್ಯಾರ್ಥಿಗಳ ತಂಡ ಆ ಬಗ್ಗೆ ಆಕ್ಷೇಪಿಸಿ ಪ್ರಶ್ನಿಸಿತ್ತು.
ಮರುದಿನ ಜುಲೈ 15ರಂದು ಅದೇ ಹಿಂದೂ ವಿದ್ಯಾರ್ಥಿಗಳಿಗೆ ಅನ್ಯ ಕೋಮಿನ ತಂಡವೊಂದು ಅದೇ ವಿಚಾರವಾಗಿ ವಾಗ್ವಾದ ನಡೆಸಿ ಹಲ್ಲೆ ನಡೆಸಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಹಲ್ಲೆಗೊಳಗಾದ ಯುವಕರು ದೂರು ನೀಡಿರುವುದಾಗಿ ತಿಳಿದುಬಂದಿದೆ.
ಸಾರ್ವಜನಿಕರ ಅಭಿಪ್ರಾಯ: ಇಂತಹಾ ಘಟನೆಗಳು ಪುತ್ತೂರಿನಲ್ಲಿ ಹಲವಾರು ಬಾರಿ ಹಿಂದೆಯೂ ನಡೆದಿದೆ. ಇಂತಹಾ ಘಟನೆಗಳಲ್ಲಿ ವಿದ್ಯಾರ್ಥಿನಿಯರು ಯಾಕೆ ಭಾಗಿಯಾಗುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
“ವಿವಾದಗಳಲ್ಲಿ ಸಿಲುಕಿಕೊಳ್ಳುವ ಮೊದಲು ವಿದ್ಯಾರ್ಥಿನಿಯರು ಸಾವಿರ ಬಾರಿ ಆಲೋಚಿಸಬೇಕು. ಅವರಿಗೆ ಈ ಬಗ್ಗೆ ಮನೆಯ ಹಿರಿಯರಿಂದಲೇ ಪಾಠ ಆರಂಭವಾಗಬೇಕು. ಕಲಿಯುವುದರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡುವುದರ ಬದಲು ಬೇರೆ ವಿಚಾರಕ್ಕೆ ಆಸ್ಪದ ಕೊಡುವ ಅಗತ್ಯ ಇಲ್ಲ.
ನೀವು ಮಾಡುವ ಒಂದೊಂದು ತಪ್ಪಿಗೂ ಶಿಕ್ಷೆ, ಕೇಸ್ ಎಂದು ಹುಡುಗರು ನಿಮ್ಮ ಸಲುವಾಗಿ ಕಷ್ಟ ಅನುಭವಿಸುತ್ತಿರುವುದು ಕಂಡು ಬರುತ್ತದೆ. ಆಲೋಚಿಸಿ ಹೆಜ್ಜೆ ಇಡಿ. ಇಂತಹಾ ಪ್ರಕರಣಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಳ್ಳಬೇಡಿ” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.