ಪುತ್ತೂರಿನಲ್ಲಿ ಯಕ್ಷೋತ್ಸವ ನಡೆಯಲಿದ್ದು, “ಯಕ್ಷತ್ರಯ” (ಮೂರು ದಿನಗಳ ಯಕ್ಷಜಾತ್ರೆ) ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಬಾರಿ ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಸಂಚಾಲಕತ್ವವನ್ನು ವಹಿಸಿ ಮೇಳವನ್ನು ಮುನ್ನಡೆಸಿಕೊಂಡು ಬರಲಿದ್ದಾರೆ.
ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಇವರು ಆಗಸ್ಟ್ 4ರಿಂದ ಈ ಸಾಲಿನ ಮಳೆಗಾಲದ ತಿರುಗಾಟವನ್ನು ಆರಂಭಿಸಲಿದ್ದಾರೆ. ಪುತ್ತೂರಿನಲ್ಲಿ ಸತತ ಮೂರುದಿನಗಳ ಯಕ್ಷಗಾನ ಪ್ರದರ್ಶನವನ್ನು ನೀಡುವುದರ ಮೂಲಕ ಮತ್ತೆ ಗೆಜ್ಜೆಯ ಸದ್ದು ಮೊಳಗಲಿದೆ.
ಆಗಸ್ಟ್ 4, 5, ಮತ್ತು 6ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಈ ಪ್ರದರ್ಶನ ನಡೆಯಲಿದೆ.
ಪ್ರತಿದಿನ ಸಂಜೆ ಘಂಟೆ 6ಕ್ಕೆ ಸರಿಯಾಗಿ ಆರಂಭವಾಗುವ ಕಾರ್ಯಕ್ರಮವನ್ನು ಮೊದಲ ದಿನ ಅಂದರೆ ಆಗಸ್ಟ್ 4ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಶ್ರೀ ಕೇಶವ ಪ್ರಸಾದ ಮುಳಿಯ ಅವರು ಉದ್ಘಾಟಿಸಲಿದ್ದಾರೆ.
ವಿವರಗಳಿಗೆ ಕರಪತ್ರದ ಚಿತ್ರಗಳನ್ನು ನೋಡಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions