ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ದಿನಾಂಕ 10-07-2022 ರಂದು ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಜರಗಿತು.
ಡಾ. ಬಿ. ಎಂ ಸೋಮಯಾಜಿಯವರು ಸ್ವಾಗತಿಸಿದರು, ಗತ ವರ್ಷದ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕ ಪತ್ರ ಇವುಗಳ ಮಂಡನೆಯ ಬಳಿಕ ನೂತನ ಆಡಳಿತ ಮಂಡಳಿಯನ್ನು ಆರಿಸಲಾಯಿತು. ಸಿಎ ಸುರೇಂದ್ರ ನಾಯಕ್ ಅವರನ್ನು ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು.
ಅನುಗ್ರಹ ಸಂದೇಶ ನೀಡಿದ ಅದಮಾರು ಶ್ರೀಗಳು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಏನೆಲ್ಲಾ ಸಾಧ್ಯತೆಗಳಿವೆ ಎಂಬುದರ ಕುರಿತು ಮುಂದೆ ವಿಸ್ತೃತವಾಗಿ ಚರ್ಚಿಸಿ, ಕಾರ್ಯಪ್ರವೃತ್ತರಾಗೋಣ ಎಂದು ನುಡಿದರು, ಜತೆಗೆ ಕಾಲೇಜಿನಲ್ಲಿ ಕಳೆದ ಆರು ದಶಕಗಳಿಂದ ವಿದ್ಯಾರ್ಜನೆಗೈದ ಎಲ್ಲಾ ಹಳೆ ವಿದ್ಯಾರ್ಥಿಗಳ ಹೆಸರು ಮತ್ತು ವಿಳಾಸದ ಪಟ್ಟಿ ಸಿದ್ಧವಾಗುತ್ತಿದೆ ಎಂದು ನುಡಿದರು.
ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆರಿಸಲಾಯಿತು.
ಚೇರ್‌ಮೆನ್ : ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
ಗೌರವಾಧ್ಯಕ್ಷರು : ಡಾ. ಜಿ. ಎಸ್. ಚಂದ್ರಶೇಖರ್
ಅಧ್ಯಕ್ಷರು : ಡಾ. ರಾಘವೇಂದ್ರ ಎ.
ಕಾರ್ಯಾಧ್ಯಕ್ಷರು : ಡಾ. ಬಿ. ಎಂ ಸೋಮಯಾಜಿ
ಉಪಾಧ್ಯಕ್ಷರು – ಡಾ. ಎಂ. ಆರ್. ಹೆಗಡೆ, ವಿಮಲಾ ಚಂದ್ರಶೇಖರ್
ಕಾರ್ಯದರ್ಶಿ : ತೇಜಸ್ವಿ ಶಂಕರ್
ಜತೆ ಕಾರ್ಯದರ್ಶಿಗಳು : ಮಂಜುನಾಥ, ಸುಪರ್ಣಾ.
ಕೋಶಾಧಿಕಾರಿ : ಡಾ. ಮಹೇಶ್ ಭಟ್
ಸದಸ್ಯರು : ಮೀನಾ ಲಕ್ಷಣಿ ಅಡ್ಯಂತಾಯ, ಮುರಲಿ ಕಡೆಕಾರ್, ಪದ್ಮಾ ಕಿಣಿ, ಎಂ. ನಾಗರಾಜ ಹೆಬ್ಬಾರ್, ಎಸ್. ಕೆ. ಆನಂದ್, ಪ್ರಸನ್ನ ಅಡಿಗ, ವಿಜಯೇಂದ್ರ ಕುಮಾರ್, ಸುಭಾಶಿತ್ ಕುಮಾರ್,ಎಸ್.ವಿ.ಭಟ್, ತಾರಾ ದೇವಿ, ರಾಕೇಶ್ ಉಳಿತ್ತಾಯ.
ಆಹ್ವಾನಿತರು : ಯಶವಂತ್ ಭಟ್, ಮಂಜುನಾಥ ಕರಬ, ಈಶ್ವರ ಚಿಟ್ಪಾಡಿ, ಪ್ರದೀಪ ಜೋಗಿ.
ಪ್ರತಿಭಾ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುರಲಿ ಕಡೆಕಾರ್ ನಿರೂಪಿಸಿದರು. ನೂತನ ಕಾರ್ಯದರ್ಶಿ ತೇಜಸ್ವಿ ಶಂಕರ್ ವಂದಿಸಿದರು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು