ಪಾಟ್ನಾ ಪಕ್ಕದ ರಾಘೋಪುರದ ಗಂಗಾನದಿಯಲ್ಲಿ ಮಾವುತನೊಬ್ಬನ ಸಹಿತ ದೈತ್ಯ ಆನೆಯೊಂದು ಈಜುತ್ತಿರುವ ವಿಡಿಯೋ ವೈರಲ್ ಆಗಿದೆ.
ದೈತ್ಯ ಗಜರಾಜ್ ನೀರಿನಲ್ಲಿ 3 ಕಿಲೋಮೀಟರ್ ದೂರ ಈಜುವ ಮೂಲಕ ತನ್ನನ್ನು ಮತ್ತು ಮಾವುತನ ಜೀವವನ್ನು ಉಳಿಸಿಕೊಂಡಿದ್ದಾನೆ.
ಆನೆ ಮತ್ತು ಮಾವುತ ಗಂಗಾ ನದಿಯನ್ನು ದಾಟಲು ಪ್ರಯತ್ನಿಸುತ್ತಿರುವ ದೃಶ್ಯಗಳು ಹೃದಯಸ್ಪರ್ಶಿಯಾಗಿವೆ. ಆನೆ ಮತ್ತು ಮಾವುತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನೀರಿನಲ್ಲಿ ತಾನು ಮುಳುಗುತ್ತಿದ್ದರೂ ಆನೆ ತನ್ನ ಜೀವವನ್ನು ಪಣಕ್ಕಿಟ್ಟು ಮಾವುತನನ್ನು ರಕ್ಷಿಸಿದೆ. ಇದು ಎಲ್ಲರಿಂದಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.