Saturday, January 18, 2025
Homeಸುದ್ದಿಬೈತಡ್ಕ ಗೌರಿಹೊಳೆ ದುರಂತ - ಒಂದು ಮೃತದೇಹ ಪತ್ತೆ

ಬೈತಡ್ಕ ಗೌರಿಹೊಳೆ ದುರಂತ – ಒಂದು ಮೃತದೇಹ ಪತ್ತೆ

ಕಾಣಿಯೂರು ಸಮೀಪದ ಬೈತಡ್ಕ ಗೌರಿಹೊಳೆ ದುರಂತದ ಬಗೆಗಿನ ಎಲ್ಲಾ ಊಹಾಪೋಹಗಳಿಗೂ ಈಗ ತೆರೆ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಪತ್ತೆಯಾಗುವುದರ ಜೊತೆಗೆ ತನಿಖೆಯ ದಾರಿ ತಪ್ಪಿಸುವಂತೆ ಕಾಣಿಸುತ್ತಿದ್ದ ಹೇಳಿಕೆಗಳು ಸತ್ವವನ್ನು ಕಳೆದುಕೊಂಡಿದೆ. 

ಇಬ್ಬರಲ್ಲಿ ಓರವನ ಮೃತದೇಹ ಇಂದು ಬೆಳಗ್ಗೆ 8 ಘಂಟೆಗೆ ಪತ್ತೆಯಾಗಿದೆ. ಬೈತಡ್ಕ ಗೌರಿಹೊಳೆ ಸೇತುವೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಹೊಳೆಗೆ ಬಿದ್ದಿದ್ದ ಭಾರೀ ಗಾತ್ರದ ಮರವೊಂದರಲ್ಲಿ ಸಿಕ್ಕಿಹಾಕಿಕೊಂಡ ರೀತಿಯಲ್ಲಿ ಪತ್ತೆಯಾದ ಮೃತದೇಹ ಇಬ್ಬರಲ್ಲಿ ಯಾರದೆಂದು ಗುರುತುಹಿಡಿದ ನಂತರವೇ ತಿಳಿಯಬಹುದಾಗಿದೆ.

ನಿನ್ನೆಯ ವರೆಗೆ ಹೋಳೆ ತುಂಬಿ ಹರಿಯುತ್ತಿದ್ದುದರಿಂದ ಆ ಮರದ ದಿಮ್ಮಿ ಕಾಣಿಸುತ್ತಿರಲಿಲ್ಲ. ಇಂದು ಮಳೆಯ ಜೊತೆಗೆ ಹೊಳೆಯ ನೀರಿನ ಮಟ್ಟವೂ ಕಡಿಮೆಯಾಗಿದೆ. ಆದ್ದರಿಂದ ಆ ಮರದ ದಿಮ್ಮಿಯಲ್ಲಿ ನೇತಾಡುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮರಕ್ಕಡದ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹರಿಯುತ್ತಿದ್ದ ಹೊಳೆಯಲ್ಲಿ ಇದ್ದ ಮರದ ಕೊಂಬೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಇಲಾಖೆಯವರು ಆಗಮಿಸಿದ್ದು ಮೃತದೇಹವನ್ನು ಮೇಲೆತ್ತಿ ಶವಪರೀಕ್ಷೆಗೆ ಕಳುಹಿಸುವ ಕಾರ್ಯ ಇನ್ನಷ್ಟೇ ಆಗಬೇಕಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments