ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕಟೀಲು ಪರಿಸರದಲ್ಲಿ ನೀರು ಆವರಿಸಿಕೊಂಡಿದೆ. ನಂದಿನಿ ನದಿಯು ಉಕ್ಕಿ ಹರಿಯುತ್ತಿದ್ದು ಕಟೀಲು ಜಳಕದ ಕಟ್ಟೆಯ ಬಳಿ ನೀರು ಆವರಿಸಿದೆ.
ಕಟೀಲಿನ ಕಿರು ಸೇತುವೆ ಜಲಾವೃತಗೊಂಡಿದೆ. ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸುತ್ತಮುತ್ತಲೂ ನಂದಿನಿ ನದಿ ಉಕ್ಕಿ ಹರಿದಿದೆ.
ಜಳಕದ ಕಟ್ಟೆಯ ಬಳಿಯಲ್ಲಿರುವ ಬಡಗ ಎಕ್ಕಾರು ಗ್ರಾಮದ ಕುಕ್ಕುಂಡೇಲು,ಮಚ್ಚಾರು ಪ್ರದೇಶದ ಹಲವಾರು ಕುಟುಂಬಗಳು ಸಂಚಾರಕ್ಕೆ ಕಿರು ಸೇತುವೆಯನ್ನೇ ಅವಲಂಬಿಸಿವೆ.
ಹಾಗಾಗಿ ನೆರೆ ನೀರಿನಿಂದ ಅವರೆಲ್ಲಾ ಭಯಭೀತರಾಗಿದ್ದು ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.
ಅದೂ ಅಲ್ಲದೆ ನಂದಿನಿ ನದಿಯ ನೆರೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಆ ನೀರು ತೋಟಕ್ಕೆ ನುಗ್ಗಿ ಅಪಾರ ಕೃಷಿ ನಷ್ಟ ನಾಶಗಳು ಉಂಟಾಗಿವೆ.