Saturday, October 5, 2024
Homeಸುದ್ದಿಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಬಂಟ್ವಾಳ ಕೇಂದ್ರ ಸಮಿತಿಯ ಸಭೆ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಬಂಟ್ವಾಳ ಕೇಂದ್ರ ಸಮಿತಿಯ ಸಭೆ


ನಮ್ಮ ಕೃಷಿ ಸಂಸ್ಕೃತಿಯು ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ- ಡಾ. ವಸಂತಕುಮಾರ ತಾಳ್ತಜೆ:
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಮಾಸಿಕ ಸಭೆಯು ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರ್ ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಜರಗಿತು. ಸರಳ ಯೋಗ ಹಾಗು ಭಜನಾ ಕಾರ್ಯಕ್ರಮದ ಮೂಲಕ ಕೈಯೂರು ನಾರಾಯಣ ಭಟ್ ಸತ್ಸಂಗವನ್ನು ನಡೆಸಿಕೊಟ್ಟರು.

ಮೂಡಾಯೂರು ಗುತ್ತು ನರೇಂದ್ರ ಪಡಿವಾಳ್ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರಲ್ಲಿರುವ ಜ್ಞಾನ ಸಂಪತ್ತು ಕಿರಿಯರಿಗೆ ಮಾರ್ಗದರ್ಶನವಾಗಲಿ ಎಂದು ತಿಳಿಸಿದರು. ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಡಿತಾಯ ಶುಭ ಹಾರೈಸಿದರು.


ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎ.ವಿ.ನಾರಾಯಣ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರತಿಷ್ಠಾನದ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ. ವಸಂತ ಕುಮಾರ ತಾಳ್ತಜೆ ಕೃಷಿ ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿ ಭಾರತದ ಕೃಷಿ ಸಂಸ್ಕೃತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳಿದ್ದು ಅದರ ಅರ್ಥಪೂರ್ಣ ಆಚರಣೆಯು ಹಿಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಪ್ರೊ.ವತ್ಸಲಾ ರಾಜ್ನಿ, ಸಮಿತಿಯ ವಕ್ತಾರರಾದ ಬಾಲಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು. ಇತ್ತೀಚೆಗೆ ಚಾರ್‌ಧಾಮ ಯಾತ್ರೆ ಪೂರೈಸಿ ಬಂದ ಪ್ರತಿಷ್ಠಾನದ ಉಪಾಧ್ಯಕ್ಷರಾದ ನೇರಳಕಟ್ಟಿ ಅನಂತಪ್ರಭು ದಂಪತಿಯರನ್ನು ಸನ್ಮಾನಿಸಲಾಯಿತು. ಯಾತ್ರೆಯ ಅನುಭವಗಳನ್ನು ಅವರು ಸಭೆಯಲ್ಲಿ ಹಂಚಿಕೊ0ಡರು.


ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ವಿಶೇಷವಾಗಿ ಮಂಗಳೂರು ದಕ್ಷಿಣ ವಲಯದ ಗೌರವಾಧ್ಯಕ್ಷರಾದ ಪ್ರೊ. ಶ್ರೀರಾಮ ಕಾರಂತ್, ಘಟಕದ ಅಧ್ಯಕ್ಷರಾದ ಭರತ್, ಬಾಲಕೃಷ್ಣ ಶೆಟ್ಟಿ, ಶಿವಕುಮಾರ್, ಗಣೇಶ ಆಚಾರ್ಯ ಜೆಪ್ಪು, ಶ್ರೀಮತಿ ಸುಮಿತ್ರ ಕಾರಂತ್, ಶ್ರೀಮತಿ ಸುಜಾತ, ಮಾಧವ, ಜನಾರ್ದನ ಭಾಗವಹಿಸಿದ್ದರು. ಪ್ರತಿಷ್ಠಾನದ ಕೇಂದ್ರ ಸಮಿತಿಯ ಅನಾರು ಕೃಷ್ಣಶರ್ಮ, ಲೋಕೇಶ್ ಹೆಗ್ದೆ ಪುತ್ತೂರು, ಉದಯಶಂಕರ ರೈ ಪುಣಚ, ಜಯಾನಂದ ಪೆರಾಜೆ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.


ಪ್ರತಿಷ್ಠಾನದ ಪುತ್ತೂರು ಘಟಕದ ರಚನೆ:
ಸಂಜೀವ ನಾಯಕ್ ಕಲ್ಲೇಗ ಗೌರವಾಧ್ಯಕ್ಷರಾಗಿ, ಪುಳು ಈಶ್ವರ ಭಟ್ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಬಾಲಕೃಷ್ಣರಾವ್ ಕೊಂಬೆಟ್ಟು, ಉಮೇಶ್ ಶೆಣೈ ಉಪ್ಪಿನಂಗಡಿ ಸಂಚಾಲಕರಾಗಿ, ಕಲ್ಲೇಗ ನಾರಾಯಣಗೌಡ, ಪದ್ಮಯ.ಎಚ್ ಪಡೀಲ್, ಭಾಸ್ಕರ. ಎ ಬನ್ನೂರು, ಮಹಾಬಲ ರೈ ಒಳತಡ್ಕ, ಚಂದ್ರಶೇಖರ ಪಡುಮಲೆ, ಗುಂಡ್ಯಡ್ಕ ಈಶ್ವರ ಭಟ್, ಶ್ರೀಪತಿ ಬೈಪಾಡಿತಾಯ ಉಪಾಧ್ಯಕ್ಷರುಗಳಾಗಿ

ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀರಾಮ ಭಟ್ ಕಲ್ಲೆಗ, ಶ್ರೀಮತಿ ಪ್ರೇಮಲತಾ ರಾವ್, ಶ್ರೀಮತಿ ಶಂಕರಿ ಶರ್ಮ, ಭವಾನಿ ಶಂಕರ ಶೆಟ್ಟಿ ಪುತ್ತೂರು, ನರೇಂದ್ರ ಪಡಿವಾಳ್ ಮೂಡಾಯಿರು ಗುತ್ತು, ರಂಗನಾಥ ರಾವ್ ಬೊಳುವಾರು, ಸುಭಾಸ್ ರೈ ಬೆಳ್ಳಿಪಾಡಿ, ರಾಜಗೋಪಾಲ್ ಭಟ್ ಬನ್ನೂರು, ಸಚ್ಚಿದಾನಂದ ಪ್ರಭು, ನಾ.ಕಾರಂತ ಪೆರಾಜೆ, ಪಾಂಡುರ0ಗ ನಾಯಕ್ ಪುತ್ತೂರು, ಪಾಂಡುರ0ಗ ಹೆಗ್ಡೆ, ಶ್ರೀಪತಿ ನಾಯಕ್ ಅಜೇರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವಂತೆ ಪುತ್ತೂರು ಘಟಕದ ರಚನೆಯನ್ನು ಮಾಡಲಾಯಿತು.

ಶ್ರೀ ಬಾಲಕೃಷ್ಣರಾವ್ ಮಧ್ಯಾಹ್ನದ ಭೋಜನದ ವ್ಯವಸ್ಥೆಗೆ ಪ್ರಾಯೋಜಕರಾಗಿ ಸಹಕರಿಸಿದರು. ಪ್ರತಿಷ್ಠಾನದ ಸಹ ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಉಪಾಧ್ಯಕ್ಷ ದುಗ್ಗಪ್ಪ.ಯನ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೇದವ್ಯಾಸ ರಾಮಕುಂಜ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments