ಕಾರ್ಕಳ ಸಮೀಪದ ನಂದಳಿಕೆಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಫಘಾತ ಸಂಭವಿಸಿದೆ. ಅಫಘಾತದಲ್ಲಿ ಅಣ್ಣ ಮತ್ತು ತಮ್ಮ ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ಅಫಘಾತ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ. ಸಹೋದರರಿಬ್ಬರೂ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದರು.
ಅಣ್ಣ ಸತೀಶ್ ಕುಲಾಲ್ (33) ಜಿಮ್ ಟ್ರೈನರ್ ಆಗಿದ್ದರು. ತಮ್ಮ ಸಂದೀಪ್ ಕುಲಾಲ್ (25) ಎಲೆಕ್ಟ್ರಿಕಲ್ ಅಂಗಡಿಯನ್ನು ಹೊಂದಿದ್ದರು.
ಢಿಕ್ಕಿಯ ರಭಸಕ್ಕೆ ಸಂದೀಪ್ ಕುಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಸತೀಶ್ ಕುಲಾಲ್ ಕಾರ್ಕಳ ಸರಕಾರೀ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.