ಹಾಸ್ಯಗಾರ ವೇಣೂರು ಸುಂದರ ಆಚಾರ್ಯರ ಸಂಸ್ಮರಣೆ -ಪ್ರಶಸ್ತಿ ಪ್ರದಾನ- ತಾಳಮದ್ದಳೆ
ಇಂದು ದಿನಾಂಕ 10.07.2022 ರಂದು ಭಾನುವಾರ ತೆಂಕುತಿಟ್ಟು ಯಕ್ಷಗಾನದ ಖ್ಯಾತ ಹಾಸ್ಯಗಾರರಾಗಿದ್ದ ದಿವಂಗತ ಸುಂದರ ಆಚಾರ್ಯ ವೇಣೂರು ಇವರ ಸಂಸ್ಮರಣೆ ಹಾಗೂ ಹಾಸ್ಯರತ್ನ ವೇಣೂರು ಸುಂದರಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಭರತೇಶ ಸಭಾಭವನ ವೇಣೂರು ಇಲ್ಲಿ ಜರಗಲಿದೆ.
ಮಧ್ಯಾಹ್ನ 2 ಗಂಟೆಗೆ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ. ಸಂಜೆ 4:00 ಗಂಟೆಗೆ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸನ್ಮಾನ ಕಾರ್ಯಕ್ರಮ. ಇದರಲ್ಲಿ ಹಾಸ್ಯಗಾರ ಸುಂದರ ಆಚಾರ್ಯರ ಜೊತೆಗೆ ಸುರತ್ಕಲ್ ಮೇಳದಲ್ಲಿ ಸುಧೀರ್ಘ ಕಾಲ ವ್ಯವಸಾಯವನ್ನು ಮಾಡಿದ ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಶಿವರಾಮ ಜೋಗಿ ಬಿ.ಸಿ. ರೋಡು ಇವರಿಗೆ ಹಾಸ್ಯರತ್ನ ವೇಣೂರು ಸುಂದರ ಆಚಾರ್ಯ ಪ್ರಶಸ್ತಿ ಯನ್ನು ಬೆಳ್ತಂಗಡಿ ತಾಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಗುವುದು.
ಬಳಿಕ ಸಂಜೆ 5:00 ಗಂಟೆಗೆ ವಾಲಿಮೋಕ್ಷ ಎಂಬ ತಾಳಮದ್ದಳೆ ನಡೆಯಲಿದೆ.
(ಸಭಾ ಕಾರ್ಯಕ್ರಮದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಇದೆ.)
ಕಲಾಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ ಬಯಸುವ…..
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಊರವರು
ವೇಣೂರು ಸುಂದರ ಆಚಾರ್ಯ ಸಂಸ್ಮರಣ ಸಮಿತಿ.