Saturday, January 18, 2025
Homeಸುದ್ದಿಅನಿರೀಕ್ಷಿತ ತಿರುವು ಪಡೆಯುತ್ತಿರುವ ಪ್ರಕರಣ - ಕಾಣಿಯೂರು ಹೊಳೆಗೆ ಕಾರು

ಅನಿರೀಕ್ಷಿತ ತಿರುವು ಪಡೆಯುತ್ತಿರುವ ಪ್ರಕರಣ – ಕಾಣಿಯೂರು ಹೊಳೆಗೆ ಕಾರು

ಕಾಣಿಯೂರು ಗೌರಿ ಹೊಳೆಗೆ ಕಾರು ಬಿದ್ದ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಾ ಇದೆ. ಅಪಘಾತ ನಡೆದ ನಂತರವೂ (ರಾತ್ರಿ ೧೨. ೩೦) ಯುವಕರು ಮೊಬೈಲ್ ಮೊಬೈಲ್ ಬಳಸಿದ್ದರೇ ? ಎಂಬ ಸಂಶಯವೊಂದು ಪೊಲೀಸರ ತಲೆ ತಿನ್ನುತ್ತಿರುವ ವಿಚಾರವಾಗಿದೆ.

ಮನೆಯವರಿಗೆ ಕಾಲ್ ಮಾಡಿದ ಯುವಕರು ತಮ್ಮ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರಂತೆ. ಆ ಯುವಕರು ಈಗ ಎಲ್ಲಿದ್ದಾರೆ ಅಥವಾ ಏನು ಮಾಡುತ್ತಿದ್ದಾರೆ ಎಂಬುದು ಅವರನ್ನು ಪತ್ತೆಹಚ್ಚಿದ ಮೇಲೆಯೇ ತಿಳಿಯಬಹುದಷ್ಟೆ. ಪೊಲೀಸರು ಈಗ ಅವರ ಮೊಬೈಲ್ ನಂಬರ್ ಟ್ರೇಸ್ ಮಾಡುತ್ತಿದ್ದಾರೆ. 

ಘಟನೆಯ ವಿವರ ಹೀಗಿದೆ:

ನಿನ್ನೆ ರಾತ್ರಿ ಜುಲೈ 9ರಂದು (ಇಂದು ಜುಲೈ 10 ಮುಂಜಾನೆ 00. 30)  ಬೈತಡ್ಕ ಗೌರಿ ಹೊಳೆಗೆ ಬಿದ್ದ  ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆತ್ತಲಾಗಿದೆ.

ಆದರೆ ಕಾರಿನಲ್ಲಿದ್ದ ಇಬ್ಬರ ಯುವಕರು ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಹೊಳೆಗೆ ಬಿದ್ದ ಮಾರುತಿ 800 ಕಾರನ್ನು ಇಂದು ಮಧ್ಯಾಹ್ನ ಸುಮಾರು 12.30 ಘಂಟೆಗೆ ಮೇಲೆಕ್ಕೆತ್ತಲಾಯಿತು. ಆದರೆ ಕಾರಿನೊಳಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.

ಕಾರಿನೊಳಗಿದ್ದ ಇಬ್ಬರು ಯುವಕರ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಟ್ಲ ಸಮೀಪದ ಕುಂಡಡ್ಕದಿಂದ ಹೊರಟಿದ್ದ ಕಾರು ಗುತ್ತಿಗಾರಿನತ್ತ ಹೋಗುತ್ತಿತ್ತು. ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಬೈತಡ್ಕ ಸಮೀಪ ಚಾಲಕನ ನಿಯತ್ರ ತಪ್ಪಿ ಹೊಳೆಗೆ ಬಿದ್ದಿದೆ.

ಸಿಸಿಟಿವಿ ದೃಶ್ಯದ ಪ್ರಕಾರ ಕಾರು ಅತಿವೇಗದಿಂದ ಸಾಗುತ್ತಿತ್ತು. ಹಾಗೂ ಆ ಮಧ್ಯರಾತ್ರಿಯ ಮಳೆಯಲ್ಲಿ ಚಾಲಕನು ತಿರುವಿನಲ್ಲಿ ಕಾರನ್ನು ತಿರುಗಿಸಲು ಅಸಾಧ್ಯವಾಗುಷ್ಟು ವೇಗದಲ್ಲಿ ಕಾರನ್ನು ಓಡಿಸಲಾಗುತ್ತಿತ್ತು ಎಂದು ದೃಶ್ಯದಲ್ಲಿ ಕಾಣುತ್ತಿತ್ತು.

ಮೊದಲಿಗೆ ಕಾರನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ಆದರೆ ನೀರಿನ ರಭಸಕ್ಕೆ ಕಾರು ಮತ್ತೊಮ್ಮೆ 100 ಮೀಟರಿನಷ್ಟು ಕೆಳಕ್ಕೆ ಕೊಚ್ಚಿಹೋಯಿತು ಆಮೇಲೆ ಮುಳುಗುತಜ್ಞರು ಕಾರನ್ನು ಪತ್ತೆಹಚ್ಚಿ ಹಗ್ಗದ ಸಹಾಯದಿಂದ ಅದನ್ನು ಮೇಲೆಕ್ಕೆತ್ತಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments