Saturday, October 5, 2024
Homeಸುದ್ದಿಗಾಂಜಾ ಸೇವಿಸುತ್ತಿದ್ದ ಹಾಗೂ ಸಾರ್ವಜನಿಕರಿಗೆ ವಿತರಿಸುತ್ತಿದ್ದ 12 ವಿದ್ಯಾರ್ಥಿಗಳು ಮಂಗಳೂರು ಸಿಸಿಬಿ ವಶಕ್ಕೆ

ಗಾಂಜಾ ಸೇವಿಸುತ್ತಿದ್ದ ಹಾಗೂ ಸಾರ್ವಜನಿಕರಿಗೆ ವಿತರಿಸುತ್ತಿದ್ದ 12 ವಿದ್ಯಾರ್ಥಿಗಳು ಮಂಗಳೂರು ಸಿಸಿಬಿ ವಶಕ್ಕೆ

ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾವನ್ನು ವಿತರಿಸುತ್ತಿದ್ದ ಹಾಗೂ ಗಾಂಜಾವನ್ನು ಇಟ್ಟುಕೊಂಡಿದ್ದ  12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ  ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರ ತಂಡ  ಮಂಗಳೂರಿನ ವೆಲೆನ್ಸಿಯಾ ಸೂಟರ್ ಪೇಟೆ 3ನೇ ಕ್ರಾಸ್ ನ ವಸತಿಗೃಹವೊಂದಕ್ಕೆ ದಾಳಿ ನಡೆಸಿದೆ. ಅಲ್ಲಿ ಇದ್ದ ನಿಷೇದಿತ ಮಾದಕ ವಸ್ತು  ಗಾಂಜಾವನ್ನು ಹೊಂದಿದ ಆರೋಪದ ಮೇಲೆ 12 ವಿದ್ಯಾರ್ಥಿಗಳನ್ನು ಬಂಧಿಸಿದೆ.

ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ಮೂಲದವರು. ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, 11 ಮಂದಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಡಿಸಲಾಗಿದೆ. ಆರೋಪಿಗಳ ಪೈಕಿ 9 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3 ಮಂದಿ ವಿದ್ಯಾರ್ಥಿಗಳು ಇಂದಿರಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು. 

ಶಾನೂಫ್ ಅಬ್ದುಲ್ ಗಫೂರ್ (21)ಮೊಹಮ್ಮದ್ ರಸೀನ್(22), ಗೋಕುಲ ಕೃಷ್ಣನ್(22),  ಶಾರೂನ್ ಆನಂದ(19), ಅನಂತು ಕೆ ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್ ಎಂ ಟಿ ಪಿ(22), ಫಹಾದ್ ಹಬೀಬ್(22), ಮೊಹಮ್ಮದ್ ರಿಶಿನ್(22), ರಿಜಿನ್ ರಿಯಾಜ್(22)

 ವಿದ್ಯಾರ್ಥಿಗಳಿಂದ ರೂ. 2,85,000 ಮೌಲ್ಯ ಅಂದಾಜಿನ ಒಟ್ಟು 900 ಗ್ರಾಂ ತೂಕದ ರೂ. 20,000 ಮೌಲ್ಯದ ಗಾಂಜಾ, ಸೇದುವ ಸ್ಮೋಕಿಂಗ್ ಪೈಪ್, ರೋಲಿಂಗ್ ಪೇಪರ್ ಗಳನ್ನು, ರೂ. 4,500, ಮತ್ತು 11 ಮೊಬೈಲ್ ಫೋನ್ ಗಳನ್ನು, ಡಿಜಿಟಲ್ scale ವಶಪಡಿಸಿಕೊಳ್ಳಲಾಗಿದೆ. 

ಈ ಜಾಲದಲ್ಲಿ ಇನ್ನೂ ಹಲವು ಯುವಕರು, ವಿದ್ಯಾರ್ಥಿಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅವರನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments