ಪಂಜಾಬ್ ಸಿಎಂ ಭಗವಂತ್ ಮಾನ್ ಇದೇ ವಾರ ಮದುವೆಯಾಗಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ 48 ವರ್ಷದ ಭಗವಂತ್ ಮಾನ್ ಗುರುವಾರ ಚಂಡೀಗಢದಲ್ಲಿ ವಿವಾಹವಾಗಲಿದ್ದಾರೆ ಎಂದು ಪಕ್ಷದ ಮುಖಂಡರು ಖಚಿತಪಡಿಸಿದ್ದಾರೆ.
“ನಾಳೆ ಇಲ್ಲಿ ಖಾಸಗಿ ಸಮಾರಂಭದಲ್ಲಿ ಮನ್ ಸಾಹಬ್ ವಿವಾಹವಾಗಲಿದ್ದಾರೆ. ಅವರು ಡಾ. ಗುರುಪ್ರೀತ್ ಕೌರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮತ್ತು ಪಕ್ಷದ ಪಂಜಾಬ್ ಘಟಕದ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಪಿಟಿಐಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.
2015 ರಲ್ಲಿ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟ ನಂತರ ಇದು ಮಾನ್ ಅವರ ಎರಡನೇ ಮದುವೆಯಾಗಿದೆ.ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ 48 ವರ್ಷ ವಯಸ್ಸಿನವರಾಗಿದ್ದರೆ ಅವರನ್ನು ಈಗ ಮದುವೆಯಾಗುತ್ತಿರುವ ಡಾ. ಗುರುಪ್ರೀತ್ ಕೌರ್ ಅವರು 1993ರಲ್ಲಿ ಜನಿಸಿದವರಾಗಿದ್ದಾರೆ.