ಆನೆಯನ್ನು ರಕ್ಷಿಸಿದ ಜೆಸಿಬಿ! ವಿಚಿತ್ರವಾದರೂ ಸತ್ಯ. ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಆನೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆಯಂತೆ.
ಆನೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಜೆಸಿಬಿ ತೊಡಗಿಸಿಕೊಂಡಿರುವುದು ಈ ವೀಡಿಯೋದಲ್ಲಿ ಕಾಣಬಹುದು.
ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಕಂದಕಕ್ಕೆ ಬಿದ್ದ ಆನೆಯನ್ನು ಸ್ಥಳೀಯ ಆಡಳಿತವು ಅಗೆಯುವ ಯಂತ್ರದ (ಜೆಸಿಬಿ) ಸಹಾಯದಿಂದ ನಿನ್ನೆ ರಕ್ಷಿಸಿದೆ.
ದೊಡ್ಡ ಬಾವಿಗೆ ಬಿದ್ದ ಆನೆಯನ್ನು ಮೇಲೆ ತರುವುದು ಸುಲಭ ಸಾಧ್ಯವಾಗಿರಲಿಲ್ಲ. ಆದರೆ ಆ ಬಾವಿಗೆ ಒಂದು ಇಳಿಜಾರಾದ ಹಳ್ಳವನ್ನು ಕೊರೆಯಲಾಯಿತು. ಜೆಸಿಬಿ ಸಹಾಯದಿಂದ ಆ ಹಳ್ಳದ ಮೂಲಕ ಆನೆಯನ್ನು ಮೇಲಕ್ಕೆ ಎತ್ತಲಾಯಿತು.
ಈ ವೀಡಿಯೊವನ್ನು ANI ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೊ ನೋಡಿ.