Saturday, January 18, 2025
Homeಯಕ್ಷಗಾನಈ ಯಕ್ಷಗಾನ ನೋಡಲು ಬರುವಾಗ ಕರ್ಚೀಪು, ಶಾಲು ತನ್ನಿ - ಈ ಬಾರಿ ಸತ್ಯ ಹರಿಶ್ಚಂದ್ರ,...

ಈ ಯಕ್ಷಗಾನ ನೋಡಲು ಬರುವಾಗ ಕರ್ಚೀಪು, ಶಾಲು ತನ್ನಿ – ಈ ಬಾರಿ ಸತ್ಯ ಹರಿಶ್ಚಂದ್ರ, ಲವಕುಶ

ಮುಚ್ಚೂರಿನಲ್ಲಿ ಮತ್ತೊಂದು ಮಳೆಗಾಲದ ಮಹೋನ್ನತ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಬಾರಿ ಪ್ರಸಂಗ ವಿಭಿನ್ನತೆಯಿಂದ ಕೂಡಿದೆ. 28.08.2022 ಆದಿತ್ಯವಾರದಂದು ಮದ್ಯಾಹ್ನ 3 ಘಂಟೆಯಿಂದ ಮುಚ್ಚೂರು ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನ ಆರಂಭವಾಗಲಿದೆ. 

ಭಾವನಾತ್ಮಕ ಸನ್ನಿವೇಶಗಳನ್ನು ಇಷ್ಯಪಡುವ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಪ್ರಸಂಗ.  ಯಕ್ಷಕೂಟ ಮುಚ್ಚೂರು ಇವರು ಸಾದರಪಡಿಸುವ ಸತ್ಯ ಹರಿಶ್ಚಂದ್ರ ಮತ್ತು ಲವಕುಶ ಪ್ರಸಂಗಗಳನ್ನು ಸುಪ್ರಸಿದ್ಧ ಕಲಾವಿದರು ಪ್ರದರ್ಶಿಸಲಿದ್ದಾರೆ.

ಎರಡೂ ಪ್ರಸಂಗಗಳೂ ಕರುಣರಸ ಭರಿತವೇ ಆದರೂ ಎರಡನೆಯ ಪ್ರಸಂಗ ಹೆಚ್ಚು ವೀರರಸದಿಂದ ಕೂಡಿದೆ. ಆದರೆ ಪ್ರಬುದ್ಧ ಕಲಾವಿದರು ಲವಕುಶ ಪ್ರಸಂಗದಲ್ಲಿಯೂ ಕರುಣರಸದ ಆರ್ದ್ರತೆಯನ್ನು ತುಂಬಬಲ್ಲರು.

ಮೊದಲನೆಯ ಪ್ರಸಂಗವಂತೂ ಪ್ರೇಕ್ಷಕರ ಮನಸ್ಸಿನಲ್ಲಿ ವಿಷಾದದ ಮೌನವನ್ನು ತುಂಬಬಲ್ಲ ಕಥಾನಕ. ಪ್ರೇಕ್ಷಕರು ಜೊತೆಯಲ್ಲಿ ಕರ್ಚೀಪು ಮತ್ತು ಶಾಲನ್ನು ತೆಗೆದುಕೊಂಡು ಬನ್ನಿ (ಕಣ್ಣೀರು ಒರೆಸಲು)

ರಾತ್ರಿ ಭೋಜನದ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments