‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪುರಸ್ಕೃತ ಖ್ಯಾತ ಯಕ್ಷಗಾನ ಕಲಾವಿದ, ಪತ್ರಕರ್ತ, ಅಡಿಕೆ ಪತ್ರಿಕೆಯ ಉಪಸಂಪಾದಕ ಶ್ರೀ ನಾ.ಕಾರಂತ ಪೆರಾಜೆಯವರ ಸಂದರ್ಶನ ಇಂದು ನಮ್ಮ ಕುಡ್ಲ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಕಾರಂತರು ‘ನಾನು ಮತ್ತು ನನ್ನ ಬರಹ’ ಎಂಬ ವಿಷಯದ ಬಗ್ಗೆ ಮಾತಾಡಲಿದ್ದಾರೆ. ಸಂದರ್ಶಿಸುವವರು ಇನ್ನೋರ್ವ ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಅವರು.
ಈ ಸಂದರ್ಶನ ಇಂದು (03.07.2022) ಮದ್ಯಾಹ್ನ 12 ಘಂಟೆಗೆ ಮೂಡಿಬರಲಿದೆ. ಕಾರ್ಯಕ್ರಮದ ನೇರಪ್ರಸಾರದ ಯೂಟ್ಯೂಬ್ ಲಿಂಕ್ ಇಲ್ಲಿದೆ.