ತೆಂಕುತಿಟ್ಟಿನ ಯಕ್ಷಗಾನ ಪ್ರಿಯರಿಗೆ ಇಂದು ಒಂದು ರಸದೌತಣವಿದೆ. ಅಪರೂಪದ ಪ್ರಸಂಗ, ಪ್ರಸಿದ್ಧ ಕಲಾವಿದರ ಸಮ್ಮಿಲನದೊಂದಿಗೆ ಪ್ರದರ್ಶನಗೊಳ್ಳುವ ಅನಭಿಷಿಕ್ತ ಸಾಮ್ರಾಜ್ಞಿ ಎಂಬ ಪೌರಾಣಿಕ ಕಥಾನಕ.
ಯಕ್ಷಗಾನ ಕಲಾರಂಗ ಉಡುಪಿ ಇವರು ಪ್ರಸ್ತುತಪಡಿಸುವ ಮಳೆಗಾಲದ ಒಂದು ಉತ್ತಮ ಪ್ರದರ್ಶನ.
ಉಡುಪಿಯ ಪೂರ್ಣಪ್ರಜ್ಞ ಸಭಾಗೃಹದಲ್ಲಿ ಮಧ್ಯಾಹ್ನ ಘಂಟೆ 1.45ರಿಂದ ರಾತ್ರಿ 8 ಘಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.