2002ರ ಗೋಧ್ರಾ ರೈಲು ಕೋಚ್‌ಗೆ ಬೆಂಕಿ ಹಚ್ಚಿದ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಗೋದ್ರಾ ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2002ರ ಗೋಧ್ರಾ ರೈಲು ಕೋಚ್‌ಗೆ ಬೆಂಕಿ ಹಚ್ಚಿದ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಗೋದ್ರಾ ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಬಟುಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ಸರಕಾರಿ ಅಭಿಯೋಜಕ ಆರ್‌ಸಿ ಕೊಡೇಕಾರ್ ಮಾಹಿತಿ ನೀಡಿದ್ದಾರೆ.
19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಟುಕ್‌ನನ್ನು ಕಳೆದ ವರ್ಷ ಫೆಬ್ರವರಿ 14 ರಂದು ಗುಜರಾತ್ ಪೊಲೀಸರು ಬಂಧಿಸಿದ್ದರು. ಅವರು ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪಿಗಳ “ಕೋರ್ ಗ್ರೂಪ್” ನ ಭಾಗವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ದಿಷ್ಟ ಸುಳಿವಿನ ಆಧಾರದ ಮೇಲೆ, ಗೋಧ್ರಾ ಪೊಲೀಸರ ತಂಡವು 2021 ರಲ್ಲಿ ರೈಲ್ವೆ ನಿಲ್ದಾಣದ ಸಮೀಪವಿರುವ ಸಿಗ್ನಲ್ ಫಾಲಿಯಾ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿ ಬಟುಕ್ ನನ್ನು ಹೆಡಮುರಿ ಕಟ್ಟಿದರು.
ಫೆಬ್ರವರಿ 27, 2002 ರಂದು ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 59 ರಾಮಸೇವಕರ ಸಾವಿಗೆ ಕಾರಣವಾದ ಗೋಧ್ರಾ ಸಾಬರಮತಿ ಎಕ್ಸ್‌ಪ್ರೆಸ್‌ನ ರೈಲು ಕಂಪಾರ್ಟ್‌ಮೆಂಟ್‌ಗೆ ಬೆಂಕಿ ಹಚ್ಚಲು ಸಂಪೂರ್ಣ ಪಿತೂರಿಯನ್ನು ರೂಪಿಸಿದ, ಗುಂಪನ್ನು ಪ್ರಚೋದಿಸಿದ ಮತ್ತು ಪೆಟ್ರೋಲ್ ವ್ಯವಸ್ಥೆ ಮಾಡಿದ ಗುಂಪಿನ ಭಾಗವಾಗಿ ಅವನು ಇದ್ದನು.
ಅಧಿಕಾರಿಗಳ ಪ್ರಕಾರ, ತನಿಖೆಯ ಸಮಯದಲ್ಲಿ ಅವನ ಹೆಸರು ಕೇಳಿಬಂದ ತಕ್ಷಣ ಭತುಕ್ ದೆಹಲಿಗೆ ಓಡಿಹೋದ. ಅವರು ಕೊಲೆ ಮತ್ತು ಗಲಭೆ ಆರೋಪಗಳನ್ನು ಎದುರಿಸುತ್ತಿದ್ದ.