Sunday, January 19, 2025
Homeಸುದ್ದಿಊಟ ಮಾಡುತ್ತಿದ್ದವರ ಮೇಲೆ ಬಿದ್ದ ಫ್ಯಾನ್ - ಮೊದಲೇ ಊಹಿಸಿದ ಮಗು, ಉಳಿದವರಿಗೆ ಗೊತ್ತಾಗಲಿಲ್ಲ!

ಊಟ ಮಾಡುತ್ತಿದ್ದವರ ಮೇಲೆ ಬಿದ್ದ ಫ್ಯಾನ್ – ಮೊದಲೇ ಊಹಿಸಿದ ಮಗು, ಉಳಿದವರಿಗೆ ಗೊತ್ತಾಗಲಿಲ್ಲ!

ಕುಟುಂಬವೊಂದು ಆರಾಮವಾಗಿ ಊಟ ಮಾಡುವುದರಲ್ಲಿ ತಲ್ಲೀನವಾಗಿತ್ತು. ಒಟ್ಟಿಗೆ ಕುಳಿತು ಊಟ ಮಾಡುವುದರಲ್ಲಿ ಏನೋ ಒಂದು ರೀತಿಯ ಆನಂದ.

ಆದರೆ ಈ ಆನಂದದ ನಡುವೆ ಸಣ್ಣ ಒಂದು ಅಪಸ್ವರ, ದುರ್ಘಟನೆ ನಡೆಯಿತಾದರೂ ಅಪಾಯವೇನೂ ಸಂಭವಿಸಲಿಲ್ಲ.

ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದವರಲ್ಲಿ ಸಣ್ಣ ಮಗುವೊಂದು ಆಗಾಗ ಮೇಲಕ್ಕೆ ನೋಡುತ್ತದೆ. ಉಳಿದವರು ಮಾತ್ರ ಊಟ ಮಾಡುವುದರಲ್ಲೇ ತಲ್ಲೀನರಾಗಿದ್ದರು.

ಫ್ಯಾನಿನಲ್ಲಿ ಕೇಳುತ್ತಿದ್ದ ಆ ಅಸಹಜ ಶಬ್ದವನ್ನು ಮಗು ಮಾತ್ರ ಗುರುತಿಸಿತ್ತು. ಮಗು ಮಾತ್ರ ಮೇಲಕ್ಕೆ ಫ್ಯಾನಿನತ್ತ ಮುಖ ಮಾಡಿತ್ತು.

ಕ್ಷಣದಲ್ಲಿಯೇ ಫ್ಯಾನ್ ಅವರೆಲ್ಲರ ಮೇಲೆ ಕಳಚಿಬಿತ್ತು. ಸದ್ಯಕ್ಕೆ ಯಾರಿಗೂ ಏನೂ ಆಗದಿದ್ದದ್ದು ಪುಣ್ಯವೆಂದೇ ಹೇಳಬೇಕು. ವೀಡಿಯೊ ನೋಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments