Friday, September 20, 2024
Homeಯಕ್ಷಗಾನಶ್ರೀ ದೇವಿ ಮಹಾತ್ಮೆ - ಪ್ರಚಂಡ ಜೋಡಾಟ - ಮೂಡಬಿದಿರೆಯಲ್ಲಿ

ಶ್ರೀ ದೇವಿ ಮಹಾತ್ಮೆ – ಪ್ರಚಂಡ ಜೋಡಾಟ – ಮೂಡಬಿದಿರೆಯಲ್ಲಿ

ಮೇಳಗಳ ತಿರುಗಾಟ ಮುಗಿದುದರಿಂದ  ಯಕ್ಷಗಾನ ರಸಿಕರಿಗೆ ಈಗ ಯಕ್ಷಗಾನಾಸ್ವಾದನೆ ಮಾಡಲು ಅವಕಾಶಗಳು ಕಡಿಮೆ. ಎಡೆಬಿಡದೆ ಸುರಿಯುವ ಮಳೆಯೂ ಇದಕ್ಕೆ ಒಂದು ಕಾರಣವಿರಬಹುದು.

ಆದರೆ ಈಗೀಗ ಮಳೆಗಾಲದಲ್ಲೂ ಬೇಕಾದಷ್ಟು ಪ್ರದರ್ಶನಗಳು ನಡೆಯುತ್ತವೆ. ಇದೀಗ ಮೂಡಬಿದಿರೆಯಲ್ಲಿ ಒಂದು ಅಮೋಘ ಯಕ್ಷಗಾನ ಪ್ರದರ್ಶನ ನಿಗದಿಯಾಗಿದೆ.

ಯಕ್ಷಗಾನದ ಮಾಸ್ಟರ್ ಪೀಸ್’ ಶ್ರೀ ದೇವಿ ಮಹಾತ್ಮೆ’ ಪ್ರಸಂಗವನ್ನು ತೆಂಕುತಿಟ್ಟಿನ ನುರಿತ ವೃತ್ತಿಕಲಾವಿದರು ಪ್ರದರ್ಶಿಸಲಿದ್ದಾರೆ. ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯವರು ಸಂಘಟಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದಿರೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ನುರಿತ ಕಲಾವಿದರು ಜೋಡಾಟದ ಮೂಲಕ ಪ್ರದರ್ಶಿಸಲಿದ್ದಾರೆ.

ದಿನಾಂಕ 30.07.2022ರ ಶನಿವಾರ ಸಮಯ ಸಂಜೆ ಘಂಟೆ 7ರಿಂದ ಈ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments