ಉಡುಪಿ : ಪೂರ್ಣಪ್ರಜ್ಷಾ ಅಡಿಟೋರಿಯಂನಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಬಡಗು ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ ಅವರು ರಚಿಸಿದ ಕೃತಿ ಯಕ್ಷಗಾನ ‘ಗಾನಸಂಹಿತೆ’ಯನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಮಾತನಾಡುತ್ತಾ ಇದೊಂದು ಅಪೂರ್ವ ಕೃತಿಯಾಗಿದೆ, ಯಕ್ಷಗಾನ ಗುರುಗಳಿಗೆ, ಕಲಾವಿದರಿಗೆ ತುಂಬಾ ಉಪಯುಕ್ತ ಗ್ರಂಥ ಎಂದು ಅಭಿಪ್ರಾಯ ಪಟ್ಟರು.
ಸ್ವಾಮೀಜಿಯವರು ವಿದ್ವಾನ್ ಗಣಪತಿ ದಂಪತಿಗಳಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಎಮ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.