ಬಹುನಿರೀಕ್ಷಿತ ‘ಪುತ್ತೂರ ಹಲಸು ಮತ್ತು ಹಣ್ಣು ಮೇಳ’ ನಾಳೆ ಮತ್ತು ನಾಡಿದ್ದು ಅಂದರೆ ಜೂನ್25 ಮತ್ತು ಜೂನ್ 26ರಂದು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ನಡೆಯಲಿದೆ.
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಈ ಮೇಳ ನಡೆಯಲಿದೆ. ಮೇಳದಲ್ಲಿ ವಿವಿಧ ಜಾತಿಯ ವಿಶೇಷವಾದ ಹಲಸಿನ ಗಿಡಗಳು ಖರೀದಿಗೆ ಲಭ್ಯವಿವೆ.
ಅಲ್ಲದೆ ತಿಪಟೂರಿನ ಪ್ರಸಿದ್ಧ ಕೆಂಪು ಹಲಸಿನ ಹಣ್ಣುಗಳು ಮೇಳದ ವಿಶೇಷ ಆಕರ್ಷಣೆಯಾಗಿದೆ. ಹಲಸಿನಕಾಯಿ ತುಂಡು ಮಾಡುವ ಸಾಧನವೂ ಲಭ್ಯವಿದೆ.
ಹಲಸಿನ ಹಣ್ಣಿನಿಂದಲೇ ಮಾಡಿದ ವಿವಿಧ ಬಗೆಯ ಹಲಸಿನ ಹಣ್ಣಿನ ಖಾದ್ಯಗಳು ತಿಂಡಿಗಳು, ಐಸ್ ಕ್ರೀಮ್ ಮೊದಲಾದುವುಗಳು ದೊರಕುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಬಹುದು.