ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಮೌಲ್ಯಯುತ ಚಟುವಟಿಕೆಯ ಮೂಲಕ ಸಂಚಲನ ಮೂಡಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ,(ರಿ.) ಕಾಸರಗೋಡು ಇದರ ನೇತೃತ್ವದ ಯಕ್ಷಾನುಗ್ರಹ ವಾಟ್ಸಾಪ್ ಬಳಗ ಕಳೆದ ಮೇ ತಿಂಗಳಿಂದ, ಲಾಕ್ ಡೌನ್ ಸಮಯದಲ್ಲಿ ವಾಟ್ಸಾಪ್ ಮಾದ್ಯಮದ ಸದ್ಬಳಕೆ ಎಂದು ಆರಂಭಿಸಿದ ‘ಮರೆಯಲಾಗದ ಮಹಾನುಭಾವರು’- ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣೆಯ ಲೇಖನಗಳ ಮಾಲಿಕೆಯ 200ನೇ ಲೇಖನ ನಾಳೆ ಅಂದರೆ 24.06.2022ನೆಯ ಶುಕ್ರವಾರ ಪ್ರಕಟವಾಗಲಿದೆ.
ಈ ವರೆಗೆ 190ಕ್ಕೂ ಹೆಚ್ಚು ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣಾ ಲೇಖನಗಳನ್ನು ಪ್ರಕಟಿಸಿ ಯಕ್ಷಾನುಗ್ರಹ ವಾಟ್ಸಾಪ್ ಬಳಗ ಧನ್ಯತೆಯ ಅನುಭೂತಿಯನ್ನು ಅನುಭವಿಸಿದೆ.
ಈ ಎಲ್ಲಾ ಲೇಖನಗಳನ್ನು ಪುಸ್ತಕ ಪ್ರಕಟಣೆಯ ಮೂಲಕ ಹೊರತರುವ ಬಗ್ಗೆ ಹಲವು ಮಹತ್ವದ ತೀರ್ಮಾನ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಮಹತ್ ಬೃಹತ್ ಗ್ರಂಥ ಹೊರಬರಲಿದೆ.
ಮುಂದಿನ ಪೀಳಿಗೆಗೆ ಧಾಖಲೆ ಯಾಗಿರುವ ಮಹತ್ ಗ್ರಂಥದಲ್ಲಿ 190ಕ್ಕೂ ಹೆಚ್ಚು ಕೀರ್ತಿಶೇಷ ಕಲಾವಿದರ ಸಂಪೂರ್ಣ ವಿವರ ಲಭ್ಯವಿರುತ್ತದೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ