Friday, November 22, 2024
Homeಯಕ್ಷಗಾನವೃದ್ಧಾಶ್ರಮದಲ್ಲಿ ಭೀಮಾರ್ಜುನ ಗರ್ವಭಂಗ

ವೃದ್ಧಾಶ್ರಮದಲ್ಲಿ ಭೀಮಾರ್ಜುನ ಗರ್ವಭಂಗ

ಭೀಮಾರ್ಜುನ ಗರ್ವಭಂಗ ಯಕ್ಷಗಾನ ಪ್ರಸಂಗವನ್ನು ಬೆಂಗಳೂರಿನ ಪ್ರಸಿದ್ಧ ಕಲಾಕದ0ಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಕಳೆದ ಶನಿವಾರ ಸಂಜೆ ಬೆಂಗಳೂರಿನ ಕುಂಬಳಗೋಡು ಸಮೀಪದ ಅಗರದಲ್ಲಿನ ಮಾತೃಛಾಯಾ ವೃದ್ಧಾಶ್ರಮದ ವೇದಿಕೆಯಲ್ಲಿ ಮನ ಮುಟ್ಟುವಂತೆ ಅಭಿನಯಿಸಿ ಅಲ್ಲಿನ ಹಿರಿಯ ಜೀವಿಗಳ ಮನಸ್ಸನ್ನು ಮುದಗೊಳಿಸಿದರು.


ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪುಟ್ಟತಾಯಮ್ಮ ನವರು ಮಾತನಾಡುತ್ತ ಇಳಿವಯಸ್ಸಿನಲ್ಲಿ ಆಶ್ರಯಕ್ಕಾಗಿ ಇಂತಹ ಆಶ್ರಮಗಳು ತುಂಬಾ ಸಹಾಯಕವಾಗಿವೆ. ಅಲ್ಲದೇ ಇಲ್ಲಿ ಆಶ್ರಯ ಪಡೆದ ಹಿರಿಯ ಜೀವಿಗಳ ಏನೇ ನೋವು ಸಂಕಷ್ಟಗಳಿರಲಿ ಇಂತಹ ಕಾರ್ಯಕ್ರಮಗಳನ್ನು ನೋಡುವುದರ ಮೂಲಕ ಅವೆಲ್ಲವನ್ನು ಕ್ಷಣ ಕಾಲ ಮರೆಯುವ ಹಾಗೆ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಆ ನಿಟ್ಟಿನಲ್ಲಿ ಈ ಮಾತೃಛಾಯಾ ವೃದ್ಧಾಶ್ರಮ ಪ್ರಾಮಾಣಿಕವಾಗಿ ತನ್ನ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಪ್ರಸಂಸೆ ವ್ಯಕ್ತಪಡಿಸಿದರು. ಅಲ್ಲದೇ ಈ ಒಂದು ಯಕ್ಷಗಾನ ಪ್ರದರ್ಶನವನ್ನು ನೀಡಿದ ಬಾಲ ಕಲಾವಿದರನ್ನು ತಮ್ಮ ಪ್ರಶಂಸೆಯ ನುಡಿಗಳ ಮೂಲಕ ಆಶೀರ್ವದಿಸಿದರು.


ಕರಬ ಪ್ರತಿಷ್ಟಾನದ ದೇವರಾಜ ಕರಬ, ಅಗರದ ಕನ್ನಡ ಸಾಹಿತ್ಯ ಸಂಸ್ಕೃತಿ ವೇದಿಕೆಯ ಸದಾಶಿವಯ್ಯ ಹಾಗೂ ಮಾತೃಛಾಯಾ ಟ್ರಸ್ಟ್ ನ ನಿರ್ದೇಶಕರಾದ ಕೃಷ್ಣಮೂರ್ತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಯಕ್ಷಗಾನಕಾರ್ಯಕ್ರಮಕ್ಕೂ ಮೊದಲುಕುಮಾರಿ ಅನಘ ಹಾಗೂ ಕುಮಾರಿ ಸಹನ ತಮ್ಮ ಇಂಪಾದ ಕ0ಠದ ಮೂಲಕ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ನೀಡಿ ಮೆಚ್ಚುಗೆ ಗಳಿಸಿದರು.


ಅದಿತಿ ಉರಾಳ, ಮಧುಮಿತ, ಪೂಜಾಆಚಾರ್ಯ, ನಿತ್ಯಾ, ಅನ್ವಿತ, ನಿಶ್ಚಿತ, ಪ್ರಶಸ್ತಿ, ಪೂರ್ಣಿಮ, ತೇಜಸ್, ರಜತ್, ಅನೀಶ್ ಮತ್ತು ಚಿರಾಗ್‌ ತಮ್ಮ ಅಮೋಘ ನೄತ್ಯ ಹಾಗೂ ಅಭಿನಯದ ಮೂಲಕ ಭೀಮಾರ್ಜುನ ಗರ್ವಭಂಗ ಯಕ್ಷಗಾನ ಪ್ರಸಂಗಕ್ಕೆ ಕಳೆ ತಂದುಕೊಟ್ಟು ಪ್ರಶಂಸೆಗೆ ಪಾತ್ರರಾದರು. ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಭರತ್ ಹಾಗೂ ಮುರಳೀಧರ ನಾವಡ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments