ಐದು ದಶಕಗಳಿಗಿಂತಲೂ ಹೆಚ್ಚು ಕಾಲ ತಾಳಮದ್ದಳೆ ಮತ್ತು ಬಯಲಾಟಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕಲಾ ಸೇವೆ ಮಾಡಿದ ದಿ. ನಾರಾಯಣಚಾರ್ಯ ಗೇರುಕಟ್ಟೆ ಇವರ ನುಡಿನಮನ ಕಾರ್ಯಕ್ರಮ ಯಕ್ಷಾರಾಧನಾ ಪ್ರತಿಷ್ಠಾನ ನಾಳ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಜರುಗಿತು.
ಧಾರ್ಮಿಕ-ಸಾಂಸ್ಕೃತಿಕ ಮತ್ತು ಕಲಾಕ್ಷೇತ್ರದಲ್ಲಿ ನಾರಾಯಣಾಚಾರ್ಯರ ತೊಡಗಿಸಿಕೊಳ್ಳುವಿಕೆ ಬಗ್ಗೆ ಪ್ರೊ| ಮಧೂರು ಮೋಹನ ಕಲ್ಲೂರಾಯ ನೆನಪಿಸಿಕೊಂಡರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ್ ಮಾತನಾಡಿ ದೇವಳದ ಅಭಿವೃದ್ಧಿ ಕಾರ್ಯಕ್ರಮ ಮತ್ತು ಭಜನಾ ಸೇವೆಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು.
ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜನಾರ್ದನ ಪೂಜಾರಿ, ಶ್ರೀಮತಿ ಅಂಬಾ ಆಳ್ವಾ, ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿ, ವಿಠ್ಠಲ ಶೆಟ್ಟಿ ಉಪ್ಪಡ್ಕ, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು. ಯಕ್ಷಾರಾಧನಾ ಪ್ರತಿಷ್ಠಾನದ ರಾಘವ ಹೆಚ್ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು.
ಬಳಿಕ ಭಾಗವತ ಮಹೇಶ್ ಕನ್ಯಾಡಿ, ವಿಶ್ವನಾಥ ಆಚಾರ್ಯ ಕಡಬ, ಶ್ರೀಪತಿ ಭಟ್ ಇಳಂತಿಲ ಹಿಮ್ಮೇಳದಲ್ಲಿ “ಜಾಂಬವತಿ ಕಲ್ಯಾಣ” ತಾಳಮದ್ದಳೆ ಜರಗಿತು. ಅರ್ಥದಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಸಂಜೀವ ಪಾರೆಂಕಿ ಭಾಗವಹಿಸಿದ್ದರು.