
ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದಲ್ಲಿ 2020ನೇ ಸಾಲಿನಲ್ಲಿ ನಡೆದಿದ್ದ ಉಚಿತ ಯಕ್ಷಗಾನ ತರಬೇತಿ ಶಿಬಿರದ ವಿದ್ಯಾರ್ಥಿಗಳ ರಂಗಪ್ರವೇಶ ಕಾರ್ಯಕ್ರಮವು ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ “ಕರ್ಣಾರ್ಜುನ” ತಾಳಮದ್ದಳೆ ಏರ್ಪಡಿಸಲಾಗಿತ್ತು. ಕರ್ಣನಾಗಿ ಜಯರಾಮ ದೇವಸ್ಯ, ಅರ್ಜುನನಾಗಿ ಉದಯಶಂಕರ ಮಜಲು, ಶಲ್ಯನಾಗಿ ಗಣೇಶಪ್ರಸಾದ ಕಡಪ್ಪು, ಶ್ರೀಕೃಷ್ಣನಾಗಿ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಪಾತ್ರ ನಿರ್ವಹಿಸಿದರು.
ಭಾಗವತರಾಗಿ ಕೇಶವ ಭಟ್ ಕಂಬಾರು, ಚೆಂಡೆ ಮದ್ದಳೆಗಳಲ್ಲಿ ಮಧುಸೂದನ ಪ್ರಭು ಹಾಗೂ ಕೃಷ್ಣ ಮೂರ್ತಿ ಎಡನಾಡು ಸಹಕರಿಸಿದರು.
ಬಳಿಕ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ರಂಗಸಿರಿಯ ವಿದ್ಯಾರ್ಥಿಗಳು ನರಕಾಸುರ ಮೋಕ್ಷ ಪ್ರಸಂಗವನ್ನು ಪ್ರದರ್ಶಿಸಿದರು. ಪಾತ್ರವರ್ಗದಲ್ಲಿ ಮೇಘನ ಕುಡಾಣ, ಆಯುಷ್ ಲಕ್ಷ್ಮಣ, ಚಿರಾಗ್, ವಿನ್ಯಾಸ್, ದೇವಾಂನ್ಶಿ, ಮನ್ವಿತ್ ಕೃಷ್ಣ, ಅತುಲ್ ಕೃಷ್ಣ, ನೈತಿಕ್ ರೈ, ಮನ್ವಿತ್, ಅಭಿಜ್ಞಾ ಭಟ್, ವರ್ಷ ಲಕ್ಷ್ಮಣ್ ಹಾಗೂ ದೀಕ್ಷಾ ರಾವ್ ಮಿಂಚಿದರು.
ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಹಿಮ್ಮೇಳದಲ್ಲಿ ರವೀಶ ಬಂದ್ಯೋಡು, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಮಧುಸೂದನ ಪ್ರಭು, ಕೃಷ್ಣಮೂರ್ತಿ ಎಡನಾಡು ಸಹಕರಿಸಿದರು.
ಯಕ್ಷಗಾನ ಅಕಾಡಮಿಯ ಸದಸ್ಯರಾದ ಅಡ್ವ.ದಾಮೋದರ ಶೆಟ್ಟಿ ಹಾಗೂ ಯೋಗೀಶ್ ರಾವ್ ಚಿಗುರುಪಾದೆ ಶುಭ ಹಾರೈಕೆ ಸಂದೇಶ ಕಳುಹಿಸಿದ್ದರು.