
ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್, ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇವರ ಸಂಯುಕ್ತ ಸಂಯೋಜನೆಯಲ್ಲಿ ಬಿ.ಸಿ. ರೋಡ್ ಪೊಲೀಸ್ ಲೇನಿನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ದ್ವಾದಶ ಯಕ್ಷಾಂಜಲಿ ಎಂಬ ಸತತ 12 ದಿನಗಳಲ್ಲಿ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಈ ತಾಳಮದ್ದಳೆಯಲ್ಲಿ ತ್ರೇತಾ ಯುಗದ ಸಮಗ್ರ ‘ರಾಮಾಯಣ ದರ್ಶನ’ ಅನಾವರಣಗೊಳ್ಳಲಿದೆ.
ಕಾರ್ಯಕ್ರಮವು 09.05.2022ರ ಸೋಮವಾರದಂದು ಅಪರಾಹ್ನ 3.30 ಘಂಟೆಗೆ ಆರಂಭಗೊಳ್ಳಲಿದೆ.
ಸಮಾರೋಪ ಸಮಾರಂಭವು 20.05.2022ರ ಶುಕ್ರವಾರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಸಂಪೂರ್ಣ ವಿವರ ಕರಪತ್ರದ ಚಿತ್ರಗಳಲ್ಲಿದೆ.