ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಆಶ್ರಯದಲ್ಲಿ 18 ದಿನಗಳಿಂದ ಜರಗಿದ ಯಕ್ಷಗಾನ ಶಿಬಿರದ ಸಮಾರೋಪ ಮೇ 1ರಂದು ಶ್ರೀ ಜನಾರ್ದನ ಮಂಟಪದಲ್ಲಿ ಎಲ್.ಐ.ಸಿ.ಅಧಿಕಾರಿಗಳಾದ ಎಸ್.ಕೆ.ಆನಂದ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಅಭ್ಯಾಗತರಾಗಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ,ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್,ಉದ್ಯಮಿ ವಿಶ್ವನಾಥ ಶೆಣೈ,ನಾರಾಯಣ ಎಮ್.ಹೆಗಡೆ ಭಾಗವಹಿದರು.
ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿದರು.ನಟರಾಜ ಉಪಾಧ್ಯಾಯ ನಿರ್ವಹಿದ ಕಾರ್ಯಕ್ರಮದಲ್ಲಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.
ಮಂಜುನಾಥ ತೆಂಕಿಲ್ಲಾಯ ಕೃತಜ್ಞತೆ ಸಲ್ಲಿಸಿದರು.ಉಪಾಧ್ಯಕ್ಷ ಕೆ.ಜೆ.ಗಣೇಶ್’,ಕಾರ್ಯದರ್ಶಿ ಸುನಿಲ್ ಕುಮಾರ್,ಪ್ರವೀಣ್ ಉಪಾಧ್ಯಾಯ,ಪ್ರಕಾಶ್ ಹೆಬ್ಬಾರ್ ಉಪಸ್ಥಿತರಿದ್ದರು.
ನರಸಿಂಹ ತುಂಗರ ನಿರ್ದೇಶನದಲ್ಲಿ ಏರ್ಪಟ್ಟ ಶಿಬಿರದಲ್ಲಿ 40 ವಿದ್ಯಾರ್ಥಿಗಳು ಪಾಲುಗೊಂಡಿದ್ದರು.ಸಭೆಯ ಪೂರ್ವ ದಲ್ಲಿ ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿಕೆ ನಡೆಯಿತು.