ಯಕ್ಷಗಾನ ಪರಂಪರೆಯ ಹಾಗೂ ಬಲಿಪ ಪರಂಪರೆಯ ಪ್ರತಿನಿಧಿ ಕಟೀಲು ಮೇಳದ ಪ್ರಧಾನ ಭಾಗವತ ಬಲಿಪ ಪ್ರಸಾದ ಭಟ್ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಅಲ್ಪಕಾಲದ ಅಸೌಖ್ಯತೆಯಿಂದ ಬಳಲುತ್ತಿದ್ದರು. ಯಕ್ಷಗಾನದ ಜೀವಂತ ದಂತಕತೆಯಾದ ಶ್ರೀ ಬಲಿಪ ನಾರಾಯಣ ಭಾಗವತರ ಮೂರನೆಯ ಹಾಗೂ ಕೊನೆಯ ಪುತ್ರರಾಗಿದ್ದ ಪ್ರಸಾದರು ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ತನ್ನ ತಂದೆ ಬಲಿಪ ನಾರಾಯಣ ಭಾಗವತ, ಸಹೋದರರು, ಪತ್ನಿ ಹಾಗೂ ತನ್ನ ಮೂವರು ಪುತ್ರಿಯರನ್ನು ಅಗಲಿದ್ದಾರೆ.