ಯಕ್ಷಭಾರತಿ (ರಿ) ಕನ್ಯಾಡಿ ತಂಡದಿಂದ ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ “ಭಕ್ತ ಮಯೂರಧ್ವಜ” ತಾಳಮದ್ದಳೆ ಜರುಗಿತು.
ಭಾಗವತರಾಗಿ ಶ್ರೀ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶ್ರೀ ಶಿತಿಕಂಠ ಭಟ್ ಉಜಿರೆ ಹಾಗೂ ಶ್ರೀ ವಾಸುದೇವ ಆಚಾರ್ಯ ಉಜಿರೆ, ಚಕ್ರತಾಳದಲ್ಲಿ ಶ್ರೀರಾಮಕೃಷ್ಣ ಹೊಳ್ಳ.
ಅರ್ಥದಾರಿಗಳಾಗಿಶ್ರೀ ಸುರೇಶ ಕುದ್ರೆಂತ್ತಾಯ ಉಜಿರೆ (ಮಯೂರಧ್ವಜ), ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು (ತಾಮ್ರಧ್ವಜ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ಶ್ರೀ ನಾರಾಯಣ ಭಟ್ ಬಾಸಮೆ (ಅರ್ಜುನ), ಶ್ರೀ ಶಶಿಧರ ಕನ್ಯಾಡಿ (ನಕುಲಧ್ವಜ) ಭಾಗವಹಿಸಿದ್ದರು.
ಯಕ್ಷ ಭಾರತಿಯ ಸಹ ಕಾರ್ಯದರ್ಶಿ ಶ್ರೀಮತಿ ಭವ್ಯ ಹೊಳ್ಳ ಉಜಿರೆ ಮತ್ತು ಶ್ರೀ ರಾಧಾಕೃಷ್ಣ ಹೊಳ್ಳ ಇವರ ಪುತ್ರ ಚಿ: ಸಮರ್ಥ್ ಬ್ರಹ್ಮೋಪದೇಶದ ನಿಮಿತ್ತ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ಕಲಾವಿದರನ್ನು ಗೌರವಿಸಿದರು. ಯಕ್ಷ ಭಾರತಿ ಅಧ್ಯಕ್ಷ ಶ್ರೀ ರಾಘವೇಂದ್ರ ಬೈಪಡಿತ್ತಾಯ, ಟ್ರಸ್ಟಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಹರೀಶ್ ಕೊಳ್ತಿಗೆ ಉಪಸ್ಥಿತರಿದ್ದರು.
ಯಕ್ಷ ಭಾರತಿ ಕ್ಲಬ್ ಹೌಸ್ 108ನೇ ಕಾರ್ಯಕ್ರಮವಾಗಿ ನೇರಪ್ರಸಾರ ಮಾಡಲು ಯಶೋಧರ ಇಂದ್ರ ಮತ್ತು ಕೌಶಿಕ್ ರಾವ್ ಕನ್ಯಾಡಿ ಸಹಕರಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ್ ಅಚಾರ್ಯ ಗೇರುಕಟ್ಟೆ ಸ್ವಾಗತಿಸಿ ಶ್ರೀ ರಾಧಾಕೃಷ್ಣ ಹೊಳ್ಳ ವಂದಿಸಿದರು.