Saturday, January 18, 2025
Homeಪುಸ್ತಕ ಮಳಿಗೆಯಕ್ಷಮಾರ್ಗಮುಕುರ - ಮನೋರಮಾ ಬಿ. ಎನ್ ಅವರ ವಿಶಿಷ್ಟ ಕೃತಿ

ಯಕ್ಷಮಾರ್ಗಮುಕುರ – ಮನೋರಮಾ ಬಿ. ಎನ್ ಅವರ ವಿಶಿಷ್ಟ ಕೃತಿ

ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು 21ನೆ ಶತಮಾನದವರೆಗಿನ ನೃತ್ಯ ನಾಟ್ಯಕ್ಷೇತ್ರದಲ್ಲಿ ಕಂಡುಬಂದ ಅಂಗೋಪಾಂಗ ಅಭಿನಯಗಳ ಸೂಕ್ಷ್ಮಗಳು, ಬದಲಾವಣೆಗಳು, ಕರಣ, ಚಾರಿಗಳ ಬಗ್ಗೆ ವಿವರವಾಗಿ ತಿಳಿಯಬೇಕೆ? ಅದೂ ಕಲಿಯುವ ಸಂಬಂಧ ಪ್ರಾಯೋಗಿಕವಾದ ಸುಳುಹುಗಳ ಸಹಿತ!!?

ಭರತನಾಟ್ಯ ಕೂಚಿಪುಡಿ, ಮೋಹಿನಿಯಾಟ್ಟಮ್ ಮೊದಲಾದವುಗಳಲ್ಲಿರುವ ಅಡವುಗಳ ಮೂಲ ತುಲಜನ ಸಂಗೀತಸಾರಾಮೃತಕ್ಕಿಂತಲೂ ಮೊದಲಿಗೆ ಯಾವ ಹೆಸರಿನಲ್ಲಿ ಯಾವ ಗ್ರಂಥದಲ್ಲಿ ಹೇಳಲ್ಪಟ್ಟಿದೆಯೆಂದು ತಿಳಿದಿದೆಯೇ? ಅದರ ರೀತಿನೀತಿಗಳು ಹೇಗಿದ್ದವು?

ನಾಟ್ಯಶಾಸ್ತ್ರದ ನಂತರಕ್ಕೆ ದೇಶೀ ಉತ್ಪ್ಲುತಿ ಕರಣಗಳಷ್ಟೇ ಅಲ್ಲದೆ ಸುಮಾರು ನೂರರಷ್ಟು ಕರಣಗಳ ಪ್ರಸಕ್ತಿಯಿದೆ. ಅದರ ಬಗ್ಗೆ, ಅದರ ಪುನರ್ನವೀಕರಣದ ಬಗ್ಗೆ ತಿಳಿಯಬೇಕೆ?

ಭ್ರಮರಿ ಗಳನ್ನೇ ಬಳಸಿ ಮಾಡುತ್ತಿದ್ದ ನೃತ್ತವನ್ನು ಯಕ್ಷಗಾನದಲ್ಲಿ ಮಾಡುವುದಕ್ಕೆ ಏನೆಂದು ಹೇಳುತ್ತಾರೆ? ಅದರ ಸಂವಿಧಾನ ಮೊದಲು ಹೇಗಿತ್ತು?

ಭಾರತಕ್ಕೆ ಒದಗಿದ ಮತೀಯ ಆಕ್ರಮಣಗಳ ನಡುವೆ ನಮ್ಮ ಶಾಸ್ತ್ರಪರಂಪರೆ ಹೇಗೆ ಬೆಳೆದಿದೆ? ಯಾವ ಮಾದರಿಯ ಪ್ರಯತ್ನಗಳು ನಡೆದಿವೆ?ಯಾರ, ಯಾವ ಪರಂಪರೆ ಹೆಚ್ಚಾಗಿ ಕಂಡುಬರುತ್ತದೆ?

ಶಾಸ್ತ್ರಗ್ರಂಥರಚನೆಯಲ್ಲಿ ಮುಸ್ಲಿಮರ ಪ್ರಯತ್ನ ಗಳು ಹೇಗಿದ್ದವು? ಅವು ಮುಸ್ಲಿಮರದ್ದೇ ಆಗಿತ್ತೇ?ಭಾರತದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವಲ್ಲಿ ಅವರ ಪಾಲ್ಗೊಳ್ಳುವಿಕೆ ಎಲ್ಲಿ ಹೇಗಿದೆ?

ಹೀಗೆ ಹತ್ತು ಹಲವು ವಿನೂತನ ಕುತೂಹಲಕರ ಸಂಶೋಧನ ಸಂಗತಿಗಳನ್ನು ಅರಿಯುವ ಆಸಕ್ತಿಯಿದೆಯೇ? ಹಾಗಿದ್ದರೆ ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ

ಈವರೆಗಿನ ಯಾವುದೇ ಪುಸ್ತಕಗಳಲ್ಲಿಯೂ ಸಿಗದ ಅಪೂರ್ವವಾದ ಸಂಗತಿಗಳನ್ನು ಒಳಗೊಂಡ ಕೃತಿ ಮನೋರಮಾ ಬಿ. ಎನ್. ಅವರ
ಯಕ್ಷಮಾರ್ಗಮುಕುರ

ಪ್ರಿ ಬುಕ್ಕಿಂಗ್ ಬೆಲೆ 600 ಮಾತ್ರ…

ಹೆಚ್ಚಿನ ವಿವರಕ್ಕೆ ವಿವರಪತ್ರವನ್ನು ಪರಿಶೀಲಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments