ಪುತ್ತೂರಿನ ನೂಜಿ ತೆಂಕಿಲದಲ್ಲಿರುವ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯ ಧರ್ಮನೇಮೋತ್ಸವವು ಇದೇ ಬರುವ ಫೆಬ್ರವರಿ 18ರಿಂದ 20ರ ವರೆಗೆ ನಡೆಯಲಿದೆ.
ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಪಿಲಿಚಾಮುಂಡಿ, ಧರ್ಮದೈವ ಜೂಮಾದಿ – ಬಂಟ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ನಡೆಯಲಿರುವುದು.
18.02.2022 ಶುಕ್ರವಾರ ಬೆಳಗ್ಗೆ 7 ಘಂಟೆಯಿಂದ ಗಣಪತಿ ಹೋಮ, ಶುದ್ಧೀಕಲಶ, ಪಾನಕ ಪೂಜೆ ಮತ್ತು ಸತ್ಯನಾರಾಯಣ ಪೂಜೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಘಂಟೆಯಿಂದ ಕಲ್ಲುರ್ಟಿ, ಕುಪ್ಪೆಪಂಜುರ್ಲಿ ಮತ್ತು ಗುಳಿಗ ನೇಮ, ಪ್ರಸಾದ ವಿತರಣೆ ನಡೆಯಲಿದೆ.
19.02.2022 ಶನಿವಾರ ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ಮತ್ತು ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ನೇಮ, ಪ್ರಸಾದ ವಿತರಣೆ ನಡೆಯಲಿದೆ.
20.02.2022 ಶನಿವಾರ ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ಮತ್ತು ಧರ್ಮದೈವ ಜೂಮಾದಿ- ಬಂಟ ದೈವದ ನೇಮ, ಪ್ರಸಾದ ವಿತರಣೆ ಕಾರ್ಯಕ್ರಮ ಜರಗಲಿರುವುದು ಎಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ಯಜಮಾನ ಶ್ರೀ ಕೆ. ರಾಧಾಕೃಷ್ಣ ಉಪ್ಪಿನಂಗಡಿ ಮತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.