
ಕಳೆದ ತಿಂಗಳು ವಾಹನ ಅಪಘಾತದಲ್ಲಿ ನಿಧನ ಹೊಂದಿದ ಹಿರಿಯಡಕ ಮೇಳದ ಪ್ರಸಿದ್ಧ ಕಲಾವಿದ ವೇಣೂರು ವಾಮನ ಕುಮಾರ್ ಇವರ ಪತ್ನಿ ಆಶಾ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಐವತ್ತು ಸಾವಿರ ರೂಪಾಯಿಯ ಸಾಂತ್ವನ ನಿಧಿಯನ್ನು ದಿನಾಂಕ 04-02-2022ರಂದು ಹಿರಿಯಡಕ ಮೇಳದ ವೇದಿಕೆಯಲ್ಲಿ ನೀಡಲಾಯಿತು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಿರಿಯಡಕದ ನಾಗರಿಕರಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಾಗೂ ಮೇಳದ ಕಲಾವಿದರಿಂದ ಸಂಗ್ರಹಿಸಿದ ಮೂವತ್ತೆರಡು ಸಾವಿರ ರೂಪಾಯಿಯ ನಿಧಿಯನ್ನು ಕಲಾವಿದನ ಕುಟುಂಬಕ್ಕೆ ನೀಡಲಾಯಿತು.
ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆಯವರು ವಾಮನ ಕುಮಾರರ ಈರ್ವರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದರು.
ಹಿರಿಯಡಕ ದೇವಳದ ಅರ್ಚಕರಾದ ಶ್ರೀ ರಂಗನಾಥ ಭಟ್, ಶ್ರೀಮತಿ ಪೂರ್ಣಿಮಾ ಸುರೇಶ್ ಹಾಗೂ ಕಲಾವಿದರ ಪ್ರತಿನಿಧಿಯಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದರು.