Sunday, January 19, 2025
Homeಯಕ್ಷಗಾನಯಕ್ಷಗಾನ ಕಲಾರಂಗದ ಕಛೇರಿಗೆ ಕೃಷ್ಣಾಪುರ ಸ್ವಾಮೀಜಿ ಭೇಟಿ

ಯಕ್ಷಗಾನ ಕಲಾರಂಗದ ಕಛೇರಿಗೆ ಕೃಷ್ಣಾಪುರ ಸ್ವಾಮೀಜಿ ಭೇಟಿ

ಈ ತಿಂಗಳ 18ನೇ ತಾರೀಖಿಗೆ ನಾಲ್ಕನೇ ಬಾರಿ ಸರ್ವಜ್ಞಪೀಠ ಆರೋಹಣ ಮಾಡಿ ಶ್ರೀಕೃಷ್ಣನ ಪೂಜಾಕೈಂಕರ್ಯ ಸ್ವೀಕರಿಸಲಿರುವ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದ ಕಛೇರಿಗೆ ಭೇಟಿ ನೀಡಿ ಅನುಗ್ರಹ ಸಂದೇಶ ನೀಡಿದರು.

ತಮ್ಮ ಪರ್ಯಾಯಾವಧಿಯಲ್ಲಿ ಸಂಸ್ಥೆಗೆ ಶ್ರೀಮಠದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಸ್ವಾಮೀಜಿಯವರಿಗೆ ಫಲಸಮರ್ಪಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು.

ಉದ್ಯಮಿ ಯು. ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಪ್ರೊ. ಸದಾಶಿವ ರಾವ್, ಮನೋಹರ ಕೆ., ನಾರಾಯಣ ಎಂ. ಹೆಗಡೆ, ಎಚ್.ಎನ್ ಶೃಂಗೇಶ್ವರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments