Saturday, July 6, 2024
Homeಇಂದಿನ ಕಾರ್ಯಕ್ರಮಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಡೈರಿ ಬಿಡುಗಡೆ

ಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಡೈರಿ ಬಿಡುಗಡೆ

ಯಕ್ಷಗಾನ ಕಲಾರಂಗ (ರಿ.) ಉಡುಪಿ ಪ್ರತಿವರ್ಷ ಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಯಕ್ಷ ನಿಧಿ ಡೈರಿ ಪ್ರಕಟಿಸಿ ಎಲ್ಲ ಕಲಾವಿದರಿಗೆ ನೀಡುತ್ತಿದೆ. 2022ರ ಡೈರಿ ಬಿಡುಗಡೆ ಕಾರ್ಯಕ್ರಮ ಮೂಡಬಿದ್ರೆಯ ಜೈನಮಠದಲ್ಲಿ 02-01-2022ರಂದು ಜರಗಿತು.

ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಡೈರಿ ಬಿಡುಗಡೆ ಮಾಡಿ,ಯಕ್ಷಗಾನ ಕಲಾರಂಗ ಕಲೆ-ಕಲಾವಿದರ ಕ್ಷೇಮ ಚಿಂತನೆ ಮತ್ತು ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು. ಮಠ-ಮಂದಿರಗಳು ಆಧ್ಯಾತ್ಮಿಕ ಅನುಸಂಧಾನದ ಕಾರ್ಯವನ್ನು ಪೂಜೆ, ಧಾರ್ಮಿಕ ಉಪನ್ಯಾಸಗಳ ಮೂಲಕ ಮಾಡಿದರೆ, ಯಕ್ಷಗಾನ ಭಾಗವತ, ಪುರಾಣಾದಿಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಕಲಾರಂಗದ ಚಟುವಟಿಕೆಗಳಿಗೆ ನಮ್ಮ ಮಠದ ಸಹಕಾರ ಸದಾ ಲಭ್ಯವಿದೆ ಎಂದು ನುಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್, ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವ, ಉದ್ಯಮಿ ಯು. ವಿಶ್ವನಾಥ ಶೆಣೈ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ.ಭಟ್, ಪಿ. ಕಿಶನ್ ಹೆಗ್ಡೆ, ಪದಾಧಿಕಾರಿಗಳಾದ ಮನೋಹರ ಕೆ., ಎಚ್. ಎನ್. ಶೃಂಗೇಶ್ವರ, ಬಿ.ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಟರಾಜ್ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಎಚ್.ಎನ್. ವೆಂಕಟೇಶ್ವರ ಉಪಸ್ಥಿತರಿದ್ದರು. ಕಟೀಲು ಮೇಳದ ಕಲಾವಿದ ಶ್ರೀನಿವಾಸರಿಗೆ ಡೈರಿ ನೀಡಲಾಯಿತು.

ಕಲಾವಿದ,ಸಂಘಟಕ ದೇವಾನಂದ ಉಪಾಧ್ಯ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments