ಅಂಬಲಪಾಡಿ ಯಕ್ಷಗಾನ ಮಂಡಳಿಯಲ್ಲಿ ಎರಡು ದಶಕಗಳ ಕಾಲ ವೇಷಧಾರಿಯಾಗಿ ಸೇವೆಗೈದು ಪ್ರಕೃತ ಅಮೇರಿಕದಲ್ಲಿ ನೆಲೆಸಿರುವ ಡಾ. ಎಚ್. ರಾಜೇಂದ್ರ ಕೆದ್ಲಾಯ ಇಂದು ಮಂಡಳಿಯ ನೂತನ ಕಟ್ಟಡಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನರಸಿಂಹ ತುಂಗರ ನಿರ್ದೇಶನದಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕೆದಿಲಾಯರು ಯಕ್ಷಗಾನ ಪರಿಪೂರ್ಣ ಕಲೆಯಾಗಿ ಜಾಗತಿಕ ಮನ್ನಣೆ ಗಳಿಸಿದ್ದು,ಹೇಗೆ ತನಗೆ ಯಕ್ಷಗಾನದಿಂದಾಗಿ ಅಮೇರಿಕದಲ್ಲಿ ಗೌರವ ದೊರೆಯುತ್ತಿದೆ ಎಂಬುದನ್ನು ವಿವರಿಸಿ,ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್,ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ತಾರಾ ದೇವಿ, ಅಂಬಲಪಾಡಿ ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್, ಕೋಶಾಧಿಕಾರಿ ಎ.ನಟರಾಜ ಉಪಾಧ್ಯ ಉಪಸ್ಥಿತರಿದ್ದರು.