Friday, November 22, 2024
Homeಯಕ್ಷಗಾನಕೀರಿಕ್ಕಾಡು ಪ್ರಶಸ್ತಿ ಪ್ರದಾನ ಹಾಗೂ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 77ನೆಯ ವಾರ್ಷಿಕೋತ್ಸವ

ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಹಾಗೂ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 77ನೆಯ ವಾರ್ಷಿಕೋತ್ಸವ

ಡಾ. ಡಿ. ಸದಾಶಿವ ಭಟ್ಟರಿಗೆ ಕೀರಿಕ್ಕಾಡು ಪ್ರಶಸ್ತಿ

ವಿವಿಧ ಭಾಷೆಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಖ್ಯಾತ ಕವಿ ಸಾಹಿತಿ
ಬಹುಭಾಷಾ ವಿದ್ವಾಂಸ ಡಾ. ಡಿ ಸದಾಶಿವ ಭಟ್ಟ ಬೆಟ್ಟಂಪಾಡಿ ಅವರಿಗೆ 2021ರ
ಕೀರಿಕ್ಕಾಡು ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸುದೀರ್ಘ ಕಾಲ ಅಧ್ಯಾಪಕರಾಗಿದ್ದ
ಸದಾಶಿವ ಭಟ್ಟರು ಪಂಜೆ ಮಂಗೇಶರಾಯರ ಸಾಹಿತ್ಯದ ಕುರಿತಾದ ಸಂಶೋಧನಾ
ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಅನೇಕ ಯಕ್ಷಗಾನ ಪ್ರಸಂಗಗಳ
ರಚನೆಯೊಂದಿಗೆ ಶ್ರೀಕೃಷ್ಣ ಚರಿತ ಮತ್ತು ರಕ್ತಕ್ರಾಂತಿ ಎಂಬ ಎರಡು ಕನ್ನಡ ಯಕ್ಷಗಾನ
ಮಹಾಕಾವ್ಯಗಳನ್ನು ರಚಿಸಿದ್ದಾರೆ.

ಡಾ. ಡಿ ಸದಾಶಿವ ಭಟ್ಟ ಬೆಟ್ಟಂಪಾಡಿ

ದಿನಾಂಕ 18-12-2021ರ ಶನಿವಾರ ಕೀರಿಕ್ಕಾಡು
ಸ್ಮಾರಕ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿರುವ ಬನಾರಿ ಶ್ರೀ
ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 77ನೇ ವಾರ್ಷಿಕೋತ್ಸವ ಸಮಾರಂಭದಂದು
ಅವರಿಗೆ ಕೀರಿಕ್ಕಾಡು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ) ದೇಲಂಪಾಡಿ ಇದರ  ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ತಿಳಿಸಿದ್ದಾರೆ.

ಆ ದಿನದ ಕಾರ್ಯಕ್ರಮಗಳ ಸಂಪೂರ್ಣ ವಿವರ 
77ನೆಯ ವಾರ್ಷಿಕೋತ್ಸವ – ಕೀರಿಕ್ಕಾಡು ಪ್ರಶಸ್ತಿ ಪ್ರದಾನ

ದಿನಾಂಕ 18-12-2021 ಶನಿವಾರ
ಸ್ಥಳ:- ಕೀರಿಕ್ಕಾಡು ಸ್ಮಾರಕ ಸಭಾಭವನ ಬನಾರಿ
ಕಾರ್ಯಕ್ರಮಗಳು
ಪೂರ್ವಾಹ್ನ ಗಂಟೆ 9-30ಕ್ಕೆ : ಗಣಹೋಮ – ಶ್ರೀ ಗೋಪಾಲಕೃಷ್ಣ ದೇವರ ಪೂಜೆ
ಪೂರ್ವಾಹ್ನ ಗಂಟೆ 10-00ರಿಂದ : ಭಗವದ್ಗೀತೆಯ ವಾಚನ ಮತ್ತು ಪ್ರವಚನ (ಆಯ್ದ ಭಾಗ)
ವಿದ್ವಾನ್ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ

ಪೂರ್ವಾಹ್ನ ಗಂಟೆ 11.00ರಿಂದ : ಯಕ್ಷಗಾನ ತಾಳಮದ್ದಳೆ “ಪಾರ್ಥಸಾರಥ್ಯ” ಹಾಗೂ ಭಕ್ತಿಗೀತೆ, ಭಾವಗೀತೆಗಳ ಗಾಯನ
ಮಧ್ಯಾಹ್ನ ಗಂಟೆ 12.45ಕ್ಕೆ : ಭೋಜನ
ಅಪರಾಹ್ನ ಗಂಟೆ 2-00 ರಿಂದ : ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

ಅಧ್ಯಕ್ಷತೆ : ರಾಜ್ಯೋತ್ಸವ ಕೃಷಿ ಪ್ರಶಸ್ತಿ ವಿಜೇತ ಕಡಮಜಲು ಶ್ರೀ ಸುಭಾಷ್ ರೈ, ಸಾಹಿತ್ಯ ಸಂಸ್ಕೃತಿಯ ಪೋಷಕರು
ಕೀರಿಕ್ಕಾಡು ಪ್ರಶಸ್ತಿ ಭಾಜನರು : ಡಾ. ಡಿ. ಸದಾಶಿವ ಭಟ್ಟ ಬೆಟ್ಟಂಪಾಡಿ, ಬಹುಭಾಷಾ ಪ್ರಸಂಗಕರ್ತರು, ವಿದ್ವಾಂಸರು ಮತ್ತು ಸಾಹಿತಿ

ಅಭಿನಂದನೆ : ಶ್ರೀ ವೆಂಕಟರಾಮ ಭಟ್ಟ, ಪ್ರಾಚಾರ್ಯರು ಪ್ರತಿಭಾ ವಿದ್ಯಾಲಯ ಸುಳ್ಯ
ಶುಭ ಹಾರೈಕೆ : ಶ್ರೀ ಎ. ನಾರಾಯಣ್ ನಾÊಕ್ ಮೊಕ್ತೇಸರರು ಊಜಂಪಾಡಿ – ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನ
ಕೀರಿಕ್ಕಾಡು ಸಂಸ್ಮರಣೆ: ಡಾ. ಯಂ. ಪ್ರಭಾಕರ ರೈ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಮೀಂಜ
ಉಪಸ್ಥಿತಿ : ಶ್ರೀ ಕೆ. ಚಂದ್ರಶೇಖರ ರೈ ಕಲ್ಲಡ್ಕ, ಗ್ರೂಪ್ ಆಫ್ ಅಕ್ಷಯ ಮಂಗಳೂರು

ಸಂಜೆ ಗಂಟೆ 3-15ರಿಂದ : ಯಕ್ಷಗಾನ ತಾಳಮದ್ದಳೆ – ಕರ್ಣಪರ್ವ
ಸಂಜೆ ಗಂಟೆ 6-00ರಿಂದ : ಸರೋಜಿನಿ ಬನಾರಿ ಹಾಗೂ ಯಶಸ್ವಿ ಅಡ್ಕಾರು ಅವರ ನಿರ್ದೇಶನದಲ್ಲಿ

ಭರತನಾಟ್ಯ ಮತ್ತು ಜಾನಪದ ನೃತ್ಯ ಕಲಾ ವೈವಿಧ್ಯ.
ರಾತ್ರಿ ಗಂಟೆ 7 ಕ್ಕೆ ಮಂಗಲ

ಸರಕಾರದ ಕೋವಿಡ್ ನಿಯಮ ನಿಬಂಧನೆಗಳೊಂದಿಗೆ ಈ ಕಾರ್ಯಕ್ರಮವು ಜರಗಲಿರುವುದು. ಅವುಗಳನ್ನು ಕಡ್ಡಾಯವಾಗಿ
ಪಾಲಿಸಿ ಸರ್ವರೂ ಸಹಕರಿಸಬೇಕೆಂದು  ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments