Tuesday, December 3, 2024
Homeಯಕ್ಷಗಾನಚಿಟ್ಟಾಣಿ ಯಕ್ಷಗಾನ ಸಪ್ತಾಹ ಮತ್ತು ಪ್ರಶಸ್ತಿ ಪ್ರದಾನ

ಚಿಟ್ಟಾಣಿ ಯಕ್ಷಗಾನ ಸಪ್ತಾಹ ಮತ್ತು ಪ್ರಶಸ್ತಿ ಪ್ರದಾನ

ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ 2008 ರಿಂದ ನಡೆಸಿಕೊಂಡು ಬಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಾಳೆ  28-11-2021ರಿಂದ ಆರಂಭವಾಗಿ 04-12-2021ರ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಅನುಕ್ರಮವಾಗಿ ಸತ್ಯಹರೀಶ್ಚಂದ್ರ, ಪ್ರಮಿಳಾರ್ಜುನ-ಬಭ್ರುವಾಹನ, ಚಿತ್ರಾಕ್ಷಿ ಕಲ್ಯಾಣ, ಶೂರ್ಪನಖಾ ವಿವಾಹ-ಪೌಂಡ್ರಕ ವಧೆ, ಶ್ರೀದೇವಿ ಬನಶಂಕರಿ, ಯಕ್ಷಲೋಕ ವಿಜಯ ಮತ್ತು ಪೃಥುಯಜ್ಞ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

ಆರ‍್ಗೋಡು ಮೋಹನದಾಸ ಶೆಣೈ
ಮೂಕಾಂಬಿಕಾ ವಾರಂಬಳ್ಳಿ

ಪ್ರತೀ ದಿನ ಸಂಜೆ 6.30 ಗಂಟೆಗೆ ಪ್ರದರ್ಶನ ಆರಂಭವಾಗುತ್ತದೆ. ದಿನಾಂಕ 04.12.2021ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಕಲಾವಿದ ಆರ‍್ಗೋಡು ಮೋಹನದಾಸ ಶೆಣೈ ಅವರಿಗೆ, ಟಿ. ವಿ. ರಾವ್ ಪ್ರಶಸ್ತಿಯನ್ನು ಹವ್ಯಾಸಿ ಕಲಾವಿದೆ ಮೂಕಾಂಬಿಕಾ ವಾರಂಬಳ್ಳಿಯವರಿಗೆ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments