ಕಲೆ ಹಾಗೂ ಕಲಾವಿದರು ದೇಶಾದ್ಯಂತ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ತನ್ನ ಕೊಡುಗೆಯನ್ನು ಕೊಡುವುದೂ ಕೂಡಾ ಅತ್ಯವಶ್ಯ. ಇತ್ತೀಚೆಗೆ ಗಂಗೆಯ ಶುದ್ಧೀಕರಣದ ಮಾತು ದೇಶಾದ್ಯಂತ ಕೇಳುವಂತಾದ್ದು, ಆ ಪ್ರಯತ್ನವೂ ನಡೆಯುತ್ತಿರುವುದು, ಅದಕ್ಕೆ ಸರಿಯಾಗಿ ದೇವನದಿ ಗಂಗೆಯನ್ನು ಭುವಿಗೆ ತರುವಲ್ಲಿ ಭಗೀರಥ ಶ್ರಮ ಎಂತಾದ್ದು. ಅದರ ಪಾವಿತ್ರ್ಯತೆಯನ್ನು ಕಾಪಾಡಿ ಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಈ ಅಂಶಗಳೆಲ್ಲವನ್ನೂ ಪ್ರೇರೆಪಿಸುವಂತೆ ಮಾಡುವಲ್ಲಿ ಗಂಗಾವತರಣ ಶುದ್ಧೀಕರಣ ಯಕ್ಷಪ್ರಸಂಗವಾಗಿ ರಂಗಸ್ಥಳದಲ್ಲಿ ಯಶಸ್ವೀಯಾಗಿ ಮೂಡಿಬಂದಿದೆ ಎಂದು ಕಲಾ ಪೋಷಕರು ಹಾಗೂ ಮಯ್ಯಾಸ್ ಬೆವರೇಜಸ್ ಮತ್ತು ಫುಡ್ ಪ್ರೊಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ. ಸದಾನಂದ ಮಯ್ಯರು ಹೇಳಿದರು.
ಕಲಾಕದಂಬ ಆರ್ಟ್ ಸೆಂಟರ್ ಸಂಯೋಜನೆಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ನೆರವಿನೊಂದಿಗೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಿನ್ನೆ ಸಂಜೆ (20.11.2021) ಡಾ ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಪ್ರದರ್ಶಿಸಿದ ಯಕ್ಷಗಾನ “ಗಂಗಾವತರಣ” ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ ಅವರು ಸಮಕಾಲೀನ ಬದಲಾವಣೆಗೆ ಯಾವುದು ಹೊಂದಿಕೊಳ್ಳುವುದೋ ಅದು ದೀರ್ಘ ಕಾಲ ಉಳಿಯುವುದಕ್ಕೆ ಸಾಧ್ಯ. ಯಕ್ಷಗಾನ ಕಲೆಯು ಕೂಡಾ ಕಳೆದಾರು ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಲೇ ಬದಲಾವಣೆಗಳನ್ನು ಕಾಣುತ್ತ ಕಾಣುತ್ತ ಪ್ರೇಕ್ಷಕರನ್ನು ಮುಟ್ಟುವಲ್ಲಿ ತನ್ನದಾದೊಂದು ಶಕ್ತಿಯೇನೆಂದು ತೋರಿದೆ.
ಇಂದಿನ ಯುವ ಪೀಳಿಗೆ ಹಾಗೂ ಮುಂದಿನ ಜನಾಂಗದಲ್ಲೂ ಈ ಒಂದು ಕಲೆಯ ಬಗ್ಗೆ ಆಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳೂ ಕೂಡ ಆಗ ಬೇಕಿದೆ ಆ ನಿಟ್ಟಿನಲ್ಲಿ ಕಲಾಕದಂಬ ಸಂಸ್ಥೆ ತನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಯಕ್ಷಗಾನದ ಉಳಿವು ಇಂತಹ ಸಂಘ ಸಂಸ್ಥೆಗಳಿಂದ ಆಗ ಬೇಕಾಗಿದೆ. ಹೇಗೆ ನಾವು ತರಕಾರಿ ಹಾಗೂ ತಿನ್ನುವ ಪದಾರ್ಥಗಳನ್ನು ಕೆಡದಂತೆ ರಕ್ಷಣೆ ಮಾಡುತ್ತೇವೆಯೋ ಹಾಗೆ ನಮ್ಮ ನಾಡಿನ ಈ ಕಲೆಯು ಅಳಿಯದಂತೆ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಈ ಒಂದು ಕಲಾಸಕ್ತಿಯನ್ನು ಬೆಳೆಸುವಲ್ಲಿ ಪೋಷಕರು ಆಸಕ್ತಿವಹಿಸುವುದು ತುಂಬಾ ಮುಖ್ಯವಾಗಿದೆ ಎಂದು ಯಕ್ಷಗಾನ ಪೋಷಕರು, ಕಲಾವಿದರು ಆದ ಶ್ರೀ ಜನಾರ್ಧನ ಹಂದೆ ತಮ್ಮ ಕಾಳಜಿಯ ನುಡಿಗಳನ್ನಾಡಿದರು.
ರಾಮೋಹಳ್ಳಿಯ ಆರೂಢ ಆಶ್ರಮದ ಶ್ರೀ ಆರೂಢ ಭಾರತಿ ಸ್ವಾಮೀಜಿಯವರು, ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದಮೂರ್ತಿ ವೇದಿಕಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಮುರಳೀಧರ ನಾವಡ ನಿರೂಪಣೆ ಮಾಡಿದರು. ವಿಶ್ವನಾಥ ಉರಾಳ, ರಾಜೇಶ್ ಆಚಾರ್ಯ ನೇಪಥ್ಯ ನಿರ್ವಹಣೆಯಲ್ಲಿದ್ದರು.
ಶಾಪಗ್ರಸ್ಥ ಸಗರ ಪುತ್ರರ ಪಾಪ ತೊಳೆದು, ಶುದ್ಧೀಕರಿಸಿ ಮೋಕ್ಷ ಕರುಣಿಸಿದ ಗಂಗೆಯನ್ನು ಸಂಪೂರ್ಣ ಶುದ್ಧೀಕರಿಸುವುದರ ಜೊತೆಗೆ ಇಡೀ ವ್ಯವಸ್ಥೆಯ ಶುದ್ಧೀಕರಣವೂ ಕೂಡಾ ಆಗಬೇಕಾದ್ದು ಮುಖ್ಯ ಅಲ್ಲದೇ ಸಮಾಜದ ಕೆಟ್ಟ ಮನಸುಗಳ ಶುದ್ಧೀಕರಣವಾದರೆ “ಗಂಗಾವತರಣ” ಅರ್ಥಪೂರ್ಣ ಆಗುವುದಕ್ಕೆ ಸಾಧ್ಯ ಎಂಬುದನ್ನು ರಂಗದಲ್ಲಿ ಭಾಗವಹಿಸಿದ ಕಲಾಕದಂಬ ಆರ್ಟ್ ಸೆಂಟರ್ ಕಲಾವಿದರಾದ ಸುಬ್ರಾಯ ಹೆಬ್ಬಾರ್, ನಾರಾಯಣ ಹೆಬ್ಬಾರ್,ಮನೋಜ್, ಡಾ. ರಾಧಾಕೃಷ್ಣ ಉರಾಳ,ಅಂಬರೀಷ ಭಟ್ಟ,ರವೀಶ್ ಹೆಗಡೆ,ಭರತ್ ಪರ್ಕಳ,ಅಜಿತ್ ಕಾರಂತ್,ಆದಿತ್ಯ ಹಾಲ್ಕೋಡ್,ಪ್ರಜ್ವಲ್ ಪರ್ಕಳ ಹಾಗೂ ಪೂಜಾ ಆಚಾರ್ಯ ಮೊದಲಾದ ಕಲಾವಿದರು ನಿರೂಪಿಸಿದರು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು