ಕರೋನಾಘಾತದಿಂದ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಕರೋನ ಇಳಿಮುಖದಿಂದಾಗಿ ಮತ್ತೆ ತನ್ನ ಕಲಾ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ನಿರಂತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದ ನಮ್ಮ ಕಲಾಕದಂಬ ಆರ್ಟ್ ಸೆಂಟರ್ ಮತ್ತೆ ತನ್ನ ಕಾರ್ಯಕ್ರಮಗಳ ಮೂಲಕ ಕಲಾ ಪ್ರೇಮಿಗಳ ಮನ ತಣಿಸಲು ಸಜ್ಜಾಗಿ ನಿಂತಿದೆ.
ಇದೇ ಬರುವ ದಿನಾಂಕ-17-10-2021ರ ಭಾನುವಾರ ಸಂಜೆ 5.15ಕ್ಕೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಕೆ ಎಸ್ ಆರ್ ಟಿ ಸಿ ಲೇ ಔಟ್ ನಲ್ಲಿರುವ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ತನ್ನ ತಿಂಗಳ ಕಾರ್ಯಕ್ರಮವಾದ “ಮಾಸದ ಮೆಲುಕು” ಶಿರೋನಾಮೆಯಡಿಯಲ್ಲಿ ಮಾಸದ ಮೆಲುಕು-106ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಒಂದು ಕಾರ್ಯಕ್ರಮದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಮುರಳೀಧರ ನಾವಡ ಹಾಗೂ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಸುಗಮ ಸಂಗೀತ ಗಾಯನ ಹಾಗೂ “ದಕ್ಷಯಜ್ಞ” ಎಂಬ ಯಕ್ಷಗಾನ ಪ್ರದರ್ಶನವನ್ನು ಪ್ರದರ್ಶಿಸಲಿದ್ದಾರೆ.
ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಕವಿ ದಿವಂಗತ ಗೋಪಾಲಕೃಷ್ಣ ಅಡಿಗರ ಸಹೋದರರು ಹಾಗೂ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ನಿರ್ದೇಶಕರೂ ಆದ ಶ್ರೀ ಜಯರಾಮ ಅಡಿಗರು, ರಂಗಭೂಮಿ,ಕಿರುತೆರೆ, ಚಲನಚಿತ್ರ ನಟಿ ಹಾಗೂ ನಿರ್ಮಾಪಕಿಯಾದ ಶ್ರೀಮತಿ ನಮಿತಾ ರಾವ್, ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.
ವಿಶ್ವನಾಥ ಉರಾಳ, ದೇವರಾಜ ಕರಬ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದು ಹೆಚ್ಚಿನ ಮಾಹಿತಿಗಾಗಿ ಮುರಳೀಧರ ನಾವಡ-9886066732, 8310482075 ಸಂಪರ್ಕಿಸಬಹುದು.
ಧನ್ಯವಾದಗಳು
ಕಲಾಕದಂಬ ಆರ್ಟ್ ಸೆಂಟರ್, ಬೆಂಗಳೂರು