ಷಷ್ಟ್ಯಬ್ದ ಸಂಭ್ರಮಕ್ಕೆ ಭಾಜನರಾದ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಎಸ್.ವಿ.ಟಿ ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಗುರುವಂದನೆ ಜರಗಿತು. ಜ್ಞಾನವಾಹಿನಿ ೬ರ ಕಾಸರಗೋಡು ವಲಯ ಸಮಿತಿಯ ಸಮಾರೋಪ ಮತ್ತು ಕಾಸರಗೋಡು ಯಕ್ಷೋತ್ಸವದ ಪಂಚಮ ಕಾರ್ಯಕ್ರಮ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ಶ್ರೀ ವ್ಯಾಸ ಮಂಟಪದಲ್ಲಿ ಜರಗಿದ ವೇಳೆ ಗುರುವಂದನೆ ನಡೆಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವ ಸಲ್ಲಿಸಿದರು. ಷಷ್ಟ್ಯಬ್ದ ವಲಯ ಸಮಿತಿ ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು.
ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಷಷ್ಟ್ಯಬ್ದ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಶ್ರೀಲತಾ ಟೀಚರ್ ಸನ್ಮಾನ ಪಾತ್ರ ವಾಚಿಸಿದರು.
ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವದ ಸನ್ಮಾನ:
ಯಕ್ಷಗಾನದ ಹಿರಿಯ ಕಲಾವಿದ, ಅರ್ಥಧಾರಿ ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವ ಸನ್ಮಾನ ಜರಗಿತು. ಎಸ್.ವಿ.ಟಿ ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಜ್ಞಾನವಾಹಿನಿ 6ರ ಸರಣಿಯ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವದಲ್ಲಿ ಸನ್ಮಾನ ಜರಗಿತು.
ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಭಿನಂದಿಸಿದರು. ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ವಲಯ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು. ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಜಗದೀಶ ಕೂಡ್ಲು ಸನ್ಮಾನ ಪಾತ್ರ ವಾಚಿಸಿದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions