ಯಕ್ಷದೇಗುಲ ಕಾಂತಾವರ ರಿ. ಸಂಸ್ಥೆಯು ಕಳೆದ ಹತ್ತೊಂಬತ್ತು ವರ್ಷಗಳಿಂದ ಯಕ್ಷಗಾನದ ಆಟ ಕೂಟ , ಗಾನ ನಾಟ್ಯ ವೈಭವ , ಯಕ್ಷ ನಾಟ್ಯಶಿಕ್ಷಣ ಶಿಬಿರ ಹೀಗೆ ವಿವಿದ ಪ್ರಕಾರಗಳನ್ನು ಸಂಯೋಜನೆ ಮಾಡುತ್ತಾ ಬಂದಿದ್ದು ಪ್ರತಿ ವಾರ್ಷಿಕ ಸಮಾರಂಭಗಳಲ್ಲಿ ಯಕ್ಷಗಾನ ರಂಗದ ಸಾಧನಾ ಶೀಲ ಕಲಾವಿದರನ್ನು ಸನ್ಮಾನಿಸುತ್ತಾ ಬಂದಿದೆ.
ಅಂತೆಯೆ ಈಬಾರಿ ವಿಷೇಶವಾಗಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಧರ್ಮಸ್ಥಳದ ಮೇಳದಲ್ಲಿ ಸುಮಾರು ವರ್ಷಗಳ ಕಾಲ ಕಲಾವಿದರಾಗಿ ಖ್ಯಾತವೆತ್ತ , ರಾಜಕೀಯ ನೇತಾರ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಇವರನ್ನು ಯಕ್ಷದೇಗುಲ ಸಂಸ್ಥೆಯು ಅವರ ಸ್ವಗ್ರಹಲ್ಲಿ ಕಳೆದ ಮಂಗಳವಾರ ಸಂಸ್ಥೆಯ ಅದ್ಯಕ್ಷ ಬೆಳುವಾಯಿ ಶ್ರೀಪತಿರಾವ್ ರವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. , ಧರ್ಮರಾಜ ಕಂಬಳಿ ಕಾಂತಾವರ, ರಮೇಶ ಸೆಟ್ಟಗಾರ್, ದೇವಾನಂದ್ ಭಟ್ ಬೆಳುವಾಯಿ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ.ಹಾಗೂ ಮಧುಸೂದನ್ ಭಟ್ ಉಪಸ್ತಿತರಿದ್ದರು.