ಯಕ್ಷಗಾನ ಇತಿಹಾಸ ಕಂಡ ಅಪರೂಪದ ಆದರೆ ಅಷ್ಟೇ ಅಪೂರ್ವವೂ ಆದ, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವರ ಪತ್ನಿ ಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ 75ನೇ ಹರೆಯದ ಸಂಭ್ರಮದಲ್ಲಿ ಅವರನ್ನು ಗೌರವಿಸಿ ಅಭಿನಂದಿಸುವ ಕಾರ್ಯಕ್ರಮ ‘ಶ್ರೀ ಹರಿಲೀಲಾ 75’ ಇದೆ ಬರುವ ನವಂಬರ್ 7, 2021ರ ಭಾನುವಾರದಂದು ಮೂಡಬಿದಿರೆಯ ಅಲಂಗಾರಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಭಿನಂದನಾ ಸಮಿತಿ ಮತ್ತು ಬೈಪಾಡಿತ್ತಾಯ ದಂಪತಿಗಳ ಶಿಷ್ಯವೃಂದ ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿವರ ಲಗತ್ತಿಸಲಾಗಿದೆ.
