ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305
ಎಡದಿಂದ ಬಲಕ್ಕೆ:
1. ಶಿವನ ಮಗನ ಗೆಲುವು ಯಕ್ಷಗಾನ ಪ್ರಸಂಗವಾಗಿದೆ (6)
4. ಚಿಟ್ಟೆಯಂತೆ ನಾಟ್ಯ ಮಾಡುತ್ತಿದ್ದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ (3)
6. ಜಾನಕಿಸುತ (2)
7. ಶ್ರೀಕೃಷ್ಣನ ಮಗನನ್ನು ಹೀಗೆ ಕರೆಯಬಹುದೆ? (5)
8. ಯಕ್ಷಗಾನ ಮತ್ತು ರಂಗಸ್ಥಳವನ್ನು ಕತ್ತರಿಸಿ ಸೇರಿಸಿ. (4)
11. ಸಂಧಾನದಲ್ಲಿ ಪಾಂಡವರಿಗೆ ಕೇಳಲ್ಪಟ್ಟ ಐದು ಗ್ರಾಮಗಳಲ್ಲಿ ಒಂದು (4)
12. ಅಜ್ಞಾತವಾಸದಲ್ಲಿ ಧರ್ಮರಾಯ ಬಲಗಡೆಯಿಂದ ಎಡಕ್ಕೆ ಬರುತ್ತಿದ್ದಾನೆ! (4)
15. ನಳ ದಮಯಂತಿಯರ ಪ್ರೇಮ ಪ್ರಕರಣದಲ್ಲಿ ಈ ಪಕ್ಷಿಯ ಪಾತ್ರವೂ ಇತ್ತಂತೆ. (2)
17. ಬಾಗಿಲ ದೂತರು ಅಥವಾ ಗೂಢಚಾರರು ಬಂದು ರಾಜನಲ್ಲಿ ___________ ಒಪ್ಪಿಸುವುದು (3)
19. ಯಕ್ಷಗಾನದಲ್ಲಿ ಹೆಚ್ಚಾಗಿ ಮಂತ್ರವಾದಿಯ ಪಾತ್ರಗಳು, ಇದನ್ನು ಬಿಡಿಸುತ್ತೇವೆ ಎಂದು ಹೇಳುತ್ತಾರೆ. (4)
20. ರಾಮನಾಮವನ್ನು ಹೊಂದಿದ ಯಕ್ಷಗಾನ ಕಲಾವಿದನ ಹೆಸರಿನ ಪೂರ್ವದಲ್ಲಿ ಬರುವ ಸ್ಥಳನಾಮ. ಜೊತೆಗೆ ಕಟ್ಟೆ ಸೇರಿಕೊಂಡಿದೆ. (4)
ಮೇಲಿನಿಂದ ಕೆಳಕ್ಕೆ:
1. ‘ಪಾರ್ತಿಸುಬ್ಬನ ಯಕ್ಷಗಾನಗಳು’ ಎಂಬ ಪುಸ್ತಕದ ಸಂಪಾದಕರು (7)
2. ಕರ್ಣನ ಹುಟ್ಟಿನ ರಹಸ್ಯ ಗೊತ್ತಿದ್ದವರು ಹೀಗೂ ಕರೆಯಬಹುದಲ್ಲ (4)
3. ಯಕ್ಷಗಾನದಲ್ಲಿ ದೇವದೇವತೆಯರು ಪ್ರತ್ಯಕ್ಷರಾದಾಗ ಉಳಿದ ಪಾತ್ರಗಳು ಹೀಗೆ ಜಯಕಾರ ಹಾಕುತ್ತಾರೆ (4)
4. ದೇವೇಂದ್ರನ ಪತ್ನಿ ಕೆಳಗಿನಿಂದ ಮೇಲೇರುತ್ತಿದ್ದಾಳಲ್ಲ! (2)
5. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಈ ಪಾತ್ರ ಕೆಳಗಿಂದ ಮೇಲೆ ಬರುತ್ತಾ ಉಂಟು (4)
6. ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮನೆತನ. ಜೊತೆಯಲ್ಲಿ ನಾಲ್ಕು ಕಾಲಿನ ಪ್ರಾಣಿಯೂ ಇದೆ. (3)
9. ಯಕ್ಷಗಾನದ ನಾಟ್ಯ ಮಾಡಲು ಇದು ಬೇಕೇ ಬೇಕು. (4)
10. ದೇವಲೋಕಕ್ಕೆ ಹೀಗೆ ಹೆಸರು (2)
11. ಚಿನ್ನದ ಬಣ್ಣದ ಜಿಂಕೆ ಸತ್ತರೆ ಅದನ್ನು ಹೀಗೆ ಮಾಡಿ ಧರಿಸುತ್ತೇನೆ ಎಂದು ಸೀತೆ ಹೇಳುತ್ತಾಳೆ. (3)
13. ಪರಮಾತ್ಮನ ಇನ್ನೊಂದು ಹೆಸರು (4)
14. ಮಥುರಾಧಿಪತಿ ಸತ್ತನೇ ? ಪ್ರಸಂಗದ ಹೆಸರು. (4)
15. ಈ ರೂಪದ ದೇವರು ಹಿರಣ್ಯಾಕ್ಷನನ್ನು ಕೊಂದರು. (2)
16. ಇವರು ಖ್ಯಾತ ಅರ್ಥಧಾರಿ ಹೌದು. ಅವರ ಹೆಸರಿನ ಪೂರ್ವಪದ. ಇದರಲ್ಲಿ ಕಟ್ಟೆ ಇದೆ. (3)
18. ಪಂಡಿತರೆಂದೇ ಕರೆಸಿಕೊಂಡ ಅರ್ಥಧಾರಿಯ ಪೂರ್ವಾರ್ಧ. ಅದು ಅವರ ಊರಿನ ಹೆಸರು. (ಕೆಳಗಿನಿಂದ ಮೇಲಕ್ಕೆ) (2)
ಕಳೆದ ಯಕ್ಷಪದದ ಸರಿ ಉತ್ತರಗಳು:ಎಡದಿಂದ ಬಲಕ್ಕೆ: ಪೂರ್ವರಂಗ, ಕೆರೆಮನೆ, ಕೋದಂಡ, ಮೈರಾವಣ, ಮಕರಾಕ್ಷ, ಕೋಡಂಗಿ, ವಾದನ, ಮಂಗ, ಕುತ್ತು, ಸುರಪಾಲ, ಪಾರ್ತಿಸುಬ್ಬ, ಶಂತನು ಮೇಲಿನಿಂದ ಕೆಳಕ್ಕೆ: ವಿರಾಟಪರ್ವ, ಕೋರೆ, ಕೋಣ, ಯಕ್ಷಗಾನ ಮತ್ತು ನಾನು, ವಾಚಿಕ, ಕೋಡಗ, ಕೋಲುಳಿ ಸುಬ್ಬ, ಮಂದರ್ತಿ, ಕಪಾಲ,
ಸರಿ ಉತ್ತರ ನೀಡಿದವರು:
1. ಶ್ರೀಮತಿ ಜ್ಯೋತಿ ಕೆ. ಭಟ್, ಅರಂಬೂರು, ಸುಳ್ಯ
2. ಶ್ರೀ ಶಾಮ ಪ್ರಸಾದ್ ಪಟ್ಟಾಜೆ, ತುಮಕೂರು
3. ಶ್ರೀಮತಿ ಜ್ಯೋತಿ ಎನ್. ಜಿ. ಹೊಸಹಿತ್ಲು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions