Saturday, January 18, 2025
Homeಯಕ್ಷಗಾನದೇವಕಾನ ಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ಬಿಡುಗಡೆ

ದೇವಕಾನ ಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ಬಿಡುಗಡೆ

ಪ್ರಸಾಧನ ತಜ್ಞ, ವೇಷಧಾರಿ ಮತ್ತು ಜನಪ್ರಿಯ ಅಧ್ಯಾಪಕ ದಿ| ದೇವಕಾನ ಕೃಷ್ಣ ಭಟ್ಟರ ಜೀವನ ಪಯಣದ ವಿವರಗಳನ್ನೊಳಗೊಂಡ ಅವರ ಸಂಸ್ಮರಣ ಗ್ರಂಥದ ಬಿಡುಗಡೆ ಸಮಾರಂಭವು ದಿನಾಂಕ 12-09-2021ರ ಆದಿತ್ಯವಾರದಂದು ಸಂಜೆ 4 ಘಂಟೆಗೆ ಸರಿಯಾಗಿ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯೊಂದಿಗೆ ನೆರವೇರುವ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಲಿರುವರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರು ‘ದೇವಕಾನ’ ಗ್ರಂಥ ಲೋಕಾರ್ಪಣೆ ಮಾಡಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ  ಡಾ. ಟಿ. ಶ್ಯಾಮ ಭಟ್ ವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿಯವರು ಸಂಸ್ಮರಣ ನುಡಿಯನ್ನು ಆಡಲಿದ್ದಾರೆ. ಶ್ರೀ ಕೆ ಗೋವಿಂದ ಭಟ್ ಮತ್ತು ಶ್ರೀ ಎ. ಚನಿಯಪ್ಪ ನಾಯ್ಕ ಸನ್ಮಾನಿತರಾಗುವ ಮಹನೀಯರು.ಸಭಾ  ಕಾರ್ಯಕ್ರಮದ ಬಳಿಕ ಹನುಮಗಿರಿ ಮೇಳದವರಿಂದ ‘ಅಶೋಕಸುಂದರಿ- ಊರ್ವಶಿ ಶಾಪ-ಮಕರಾಕ್ಷ ಕಾಳಗ’ ಎಂಬ  ಯಕ್ಷಗಾನ ಪ್ರದರ್ಶನ ನಡೆಯಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments