Saturday, January 18, 2025
HomeUncategorized'ಯಕ್ಷಪಥ' (ಬೆಂಗಳೂರಿನಲ್ಲಿ ಯಕ್ಷಗಾನದ ಹೆಜ್ಜೆಗುರುತುಗಳು)

‘ಯಕ್ಷಪಥ’ (ಬೆಂಗಳೂರಿನಲ್ಲಿ ಯಕ್ಷಗಾನದ ಹೆಜ್ಜೆಗುರುತುಗಳು)

‘ಯಕ್ಷಪಥ’ (ಬೆಂಗಳೂರಿನಲ್ಲಿ ಯಕ್ಷಗಾನದ ಹೆಜ್ಜೆಗುರುತುಗಳು) ಎಂಬ ಈ ಕೃತಿಯು ಇತ್ತೀಚಿಗೆ ಪ್ರಕಟಗೊಂಡಿತು(2021). ಈ ಕೃತಿಯ ಸಂಪಾದಕರು ಡಾ. ಆನಂದರಾಮ ಉಪಾಧ್ಯ ಅವರು. ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ರಚಿಸಿದ ಕೃತಿಯಿದು. ನಾಡಿನ ಅನೇಕ ಯಕ್ಷಗಾನ ಕಲಾವಿದರ ಲೇಖನಗಳನ್ನೂ, ಸಂದರ್ಶನ ಲೇಖನಗಳನ್ನೂ ಒಳಗೊಂಡಿದೆ. ಬೆಂಗಳೂರು ನಗರದ ಯಕ್ಷಗಾನದ ಬಗೆಗೆ ಸಮಗ್ರ ಚಿತ್ರಣವನ್ನು ನೀಡಲು ಸಂಪಾದಕರು ಶ್ರಮಿಸಿದ ರೀತಿಯು ಪ್ರಶಂಸನೀಯವಾದುದು.

ಲೇಖಕ ಶ್ರೀ  ಡಾ. ಆನಂದರಾಮ ಉಪಾಧ್ಯ ಅವರು ಅರಿಕೆ ಎಂಬ ಬರಹದಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಪ್ರಕಾಶಕರಾದ ಶ್ರೀ ಕೆ. ರವಿಚಂದ್ರ ರಾವ್, ಸಾಧನಾ ಪ್ರಕಾಶನ ಬೆಂಗಳೂರು ಅವರು ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿ ಈ ಕೃತಿಯ ಬಗೆಗೆ ವಿವರಣೆಗಳನ್ನು ನೀಡಿರುತ್ತಾರೆ. ಯಕ್ಷಪಥ ಎಂಬ ಹೊತ್ತಗೆಯನ್ನು ಮುದ್ರಿಸಿ ಹೊರತಂದವರು ‘ಭರತ್ ಪಬ್ಲಿಕೇಷನ್, ದತ್ತಾತ್ರೇಯ ನಗರ, ಬೆಂಗಳೂರು ಎಂಬ ಸಂಸ್ಥೆ.

ಡಾ. ರಾಧಾಕೃಷ್ಣ ಉರಾಳ, ಎ. ಪಿ. ಕಾರಂತ್, ಕೆ.ಮೋಹನ್, ಎಚ್. ಶ್ರೀಧರ ಹಂದೆ, ಕುಂಬಳೆ ಸುಂದರ ರಾವ್, ಮಲ್ಲವ್ವ ಮೇಗೇರಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೊಳಗಿ ಕೇಶವ ಹೆಗಡೆ, ಅಜಿತೇಶ ಹೆಗಡೆ ಸಾಗರ, ಮಂಟಪ ಪ್ರಭಾಕರ ಉಪಾಧ್ಯ, ತಾರಾನಾಥ ವರ್ಕಾಡಿ, ಕಲ್ಮನೆ ಎ.ಎಸ್. ನಂಜಪ್ಪ, ಕಾ.ನ.ದಾಸಾಚಾರ್, ಕೆರೆಮನೆ ಶಿವಾನಂದ ಹೆಗಡೆ, ಕಡತೋಕಾ ಗೋಪಾಲಕೃಷ್ಣ ಭಾಗವತ, ಪ್ರೊ| ಎಂ. ಎಲ್. ಸಾಮಗ, ವೈ. ಕರುಣಾಕರ ಶೆಟ್ಟಿ, ಸೇರಾಜೆ ಸೀತಾರಾಮ ಭಟ್, ಕೆ.ಎನ್. ಅಡಿಗ ಅಡೂರು, ಡಾ. ಬೇಗಾರು ಶಿವಕುಮಾರ್,  ಡಾ. ಆನಂದರಾಮ ಉಪಾಧ್ಯ, ರಾಜಗೋಪಾಲ ಕನ್ಯಾನ, ಟಿ.ಎಸ್. ಮಹಾಬಲೇಶ್ವರ, ರವಿ ಮಡೋಡಿ, ಅಶ್ವಿನಿ ಹೊದಲ ಇವರುಗಳು ತಮ್ಮ ಅನಿಸಿಕೆ, ಅನುಭವಗಳನ್ನು ಬರಹ ರೂಪದಲ್ಲಿ ನೀಡಿರುತ್ತಾರೆ. ಈ ಕೃತಿಯ ಪ್ರಕಟಣೆಗೆ ಕಾರಣರಾದವರೆಲ್ಲರಿಗೂ ಅಭಿನಂದನೆಗಳು. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments